Belagavi NewsBelgaum NewsKarnataka NewsLatestPolitics

*ಅಪಘಾತದಲ್ಲಿ ಇಬ್ಬರ ಸಾವು: ಮನೆಗೆ ತೆರಳಿ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ರಸ್ತೆ ಅಪಘಾತದಲ್ಲಿ ಇಬ್ಬರನ್ನು ಕಳೆದುಕೊಂಡಿರುವ ಬೆಳವಟ್ಟಿ ಗ್ರಾಮದ ಚೌಗುಲೆ ಎನ್ನುವವರ ಮನೆಗೆ ಭಾನುವಾರ ತೆರಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬೆಳವಟ್ಟಿ ಗ್ರಾಮದ ರೋಹಿಣಿ ರಾಮಲಿಂಗ ಚೌಗುಲೆ ಎಂಬ ಯುವತಿ ಕೆಲವು ದಿನಗಳ ಹಿಂದೆ ಕಾರು -ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಈ ಅಪಘಾತದಲ್ಲಿ ಯುವತಿಯ ತಾಯಿ ಹಾಗೂ ಮಾವ ಕೂಡ ಗಾಯಗೊಂಡಿದ್ದರು. ದುರದೃಷ್ಟವಶಾತ್ ಮಾವ ಸಹ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ತಾಯಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿ ತಿಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಅವರ ಮನೆಗೆ ತೆರಳಿದರು. ಬಾಳಿ ಬದುಕ ಬೇಕಾಗಿದ್ದ ರೋಹಿಣಿ ಚಿಕ್ಕ ವಯಸ್ಸಿನಲ್ಲೇ ನಮ್ಮನ್ನಗಲಿರುವುದು ಅತ್ಯಂತ ದುರ್ದೈವದ ಸಂಗತಿ, ದುಃಖದ ಈ ಸಮಯದಲ್ಲಿ ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದ ಸಚಿವರು, ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಸ್ವಲ್ಪಮಟ್ಟಿನ ಆರ್ಥಿಕ ಸಹಾಯ ಮಾಡಿದರು.

Home add -Advt

Related Articles

Back to top button