Kannada NewsKarnataka NewsLatest

ವಿವಿಧೆಡೆ ಲಸಿಕಾ ಅಭಿಯಾನಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಮತ್ತು ಬೆಳಗುಂದಿ ಗ್ರಾಮದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಂಗಳವಾರ ಚಾಲನೆಯನ್ನು ನೀಡಿದರು.
ಕೊರೋನಾ ಎರಡನೆ ಅಲೆ ಸಧ್ಯಕ್ಕೆ ನಿಯಂತ್ರಣಕ್ಕೆ ಬಂದಿದೆ. ಆದರೆ ನಾವು ಮೈಮರೆಯುವುದು ಬೇಡ. ಎಚ್ಚರಿಕೆಯಿಂದಿದ್ದು, 3ನೇ ಅಲೆ ಬಾರದಂತೆ ತಡೆಯೊಣ. ಇನ್ನೂ ಕೆಲವು ತಿಂಗಳವರೆಗೆ ಅನಿವಾರ್ಯತೆಯಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಕಡೆಗೆ ಜಾಗ್ರತರಾಗಿರಿ ಎಂದು ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದರು.
ಕೋವಿಡ್ ಲಸಿಕೆಗಳ ಬಗ್ಗೆ ಕೆಲವು ಜನರಿಗೆ ಭಯವಿದ್ದು,​ ​ಲಸಿಕೆಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ, ಯಾರೊಬ್ಬ​ರೂ​​ ಭಯಪಡದೇ ಲಸಿಕೆಗಳನ್ನು ತೆಗೆದುಕೊಂಡು ಆದಷ್ಟು ಸೋಂಕಿನಿಂದ ದೂರವಿರಬೇ​ಕು. ಚಿಕ್ಕಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು​ ತಿಳಿ​ಸಿದರು.
ಈ ಸಂದರ್ಭದಲ್ಲಿ ಡಾ. ರಾಮಕೃ​ಷ್ಣ​, ಅಶೋಕ ಗೌಡ, ಹೇಮಾ ಹಡಗಳ, ಬಾಲಕೃಷ್ಣ ಲೋಹಾರ, ಗೀತಾ ದೇಕೊಳ್ಕರ್, ಪ್ರಲ್ಹಾದ್ ಚಿರಮುರ್ಕರ್, ಸೋಮನ ಗೌಡ, ಅಶ್ವಿನಿ ಕುಂದಲ್​, ತಾಲೂಕಾ ಆರೋಗ್ಯಾಧಿಕಾರಿ ಮಾಸ್ತಿಹೊಳಿ, ಡಾ. ರಾಜು ಕುಪ್ಳೆಕರ್, ಕೃಷ್ಣ ಪಾವಸೆ, ಪ್ರಕಾಶ ಬೆಳಗುಂದಕರ್, ವಿಠ್ಠಲ ದೇಸಾಯಿ, ರಾಮಕೃಷ್ಣ ಹಾಗೂ ಸ್ಟಾಪ್ ನರ್ಸ್ ಗಳು ಇತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button