Karnataka NewsLatestPolitics

*ಸಜೀವ ದಹನವಾಗಿದ್ದ ಯುವಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಕಾರ್ಖಾನೆ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದ ಯಲಗೊಂಡ ಸಣ್ಣಯಲ್ಲಪ್ಪಾ ಗುಂಡ್ಯಾಗೊಳ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾವಗೆ ಕ್ರಾಸ್‌ ಹತ್ತಿರ ಇರುವ ಸ್ನೇಹಮ್‌ ಕಾರ್ಖಾನೆಯಲ್ಲಿ ಕಳೆದ ವರ್ಷ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಸಜೀವ ದಹನವಾಗಿದ್ದ ಮಾರ್ಕೆಂಡೆಯ ನಗರದ ನಿವಾಸಿ ಯಲಗೊಂಡ ಸಣ್ಣಯಲ್ಲಪ್ಪಾ ಗುಂಡ್ಯಾಗೊಳ ಅವರ ವಾರಸುದಾರರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರೂ ಆಗಿರುವ ಲಕ್ಷ್ಮೀ ಹೆಬ್ಬಾಳಕರ್‌ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು 5 ಲಕ್ಷ ರೂ. ಪರಿಹಾರ ಧನವನ್ನು ಘೋಷಿದ್ದಾರೆ. 2024ರ ಆಗಸ್ಟ್‌ 6 ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಯಲಗೊಂಡ ಸಣ್ಣಯಲ್ಲಪ್ಪಾ ಗುಂಡ್ಯಾಗೊಳ ಸಜೀವ ದಹನವಾಗಿದ್ದರು.


ದುರ್ಘಟನೆ ನಡೆದ ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮೃತ ಕುಟುಂಬಸ್ಥರನ್ನು ಸಂತೈಸಿ, ವೈಯಕ್ತಿಕ ಪರಿಹಾರ ಮೊತ್ತ ನೀಡಿದ್ದರು. ಜೊತೆಗೆ ಸರ್ಕಾರದಿಂದಲೂ ಪರಿಹಾರ ಮೊತ್ತವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ದೇಹ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಪೋಸ್ಟ್ ಮಾರ್ಟಂ ಕೂಡ ಸಾಧ್ಯವಾಗಿರಲಿಲ್ಲ. ಹಾಗಾಗಿ ಪರಿಹಾರ ಕೊಡಿಸುವುದು ಸವಾಲಿನ ಕೆಲಸವಾಗಿತ್ತು. ಆದರೆ ಪಟ್ಟು ಬಿಡದೆ ಪರಿಹಾರ ಕೊಡಿಸುವಲ್ಲಿ ಸಚಿವರು ಯಶಸ್ವಿಯಾಗಿದ್ದಾರೆ.

Home add -Advt

Related Articles

Back to top button