Kannada NewsKarnataka News
ಕಿಡಿಗೇಡಿಗಳ ಕೃತ್ಯದಿಂದ ನೆಮ್ಮದಿ ಭಂಗ : ಯಶಸ್ವಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಂಧಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ರಣಕುಂಡೆ ಗ್ರಾಮದಲ್ಲಿ ಹಿಂದೂ – ಮುಸ್ಲಿಂ ಮಧ್ಯೆ ಕಿಡಿಗೇಡಿಗಳು ದ್ವೇಷ ಹುಟ್ಟಿಸಿ ನೆಮ್ಮದಿಗೆ ಭಂಗ ತಂದಿದ್ದ ಪ್ರಕರಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಸಂಧಾನದಿಂದಾಗಿ ಬಗೆಹರಿದಿದೆ.
ಪೊಲೀಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿದ ಲಕ್ಷ್ಮಿ ಹೆಬ್ಬಾಳಕರ್, ಎರಡೂ ಸಮಾಜದವರ ಸಭೆ ಕರೆದು ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ. ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯಬಾರದು. ಜನರು ಕಿಡಿಗೇಡಿಗಳ ಮಾತಿಗೆ ಕಿವಿಗೊಡಬಾರದು ಎಂದು ಗ್ರಾಮಸ್ಥರಿಗೆ ಹೆಬ್ಬಾಳಕರ್ ವಿನಂತಿಸಿದ್ದು, ಎಲ್ಲರೂ ಇದಕ್ಕೆ ಒಪ್ಪಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ, ಹೂಡಾ ದೇವಸ್ಥಾನಕ್ಕೆ 50 ಸಾವಿರ ರೂ.ಗಳನ್ನು( ಮಹಾಪ್ರಸಾದ ಸೇವೆಗೆ 30 ಸಾವಿರ ರೂ. ಹಾಗೂ ಜೀರ್ಣೋದ್ಧಾರಕ್ಕಾಗಿ 20 ಸಾವಿರ ರೂ) ಲಕ್ಷ್ಮಿ ಹೆಬ್ಬಾಳಕರ್ ದೇವಸ್ಥಾನದ ಕಮೀಟಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಹಿಂದೂ-ಮುಸ್ಲಿಂ ಮುಖಂಡರು, ನಿಂಗಪ್ಪ ಪಾಟೀಲ, ಸಂಜು ಪಾವಸೆ, ಮಲ್ಲಪ್ಪ ಬಿ ಪಾಟೀಲ, ಭರಮಾ ಪಾಟೀಲ, ಕಲ್ಲಪ್ಪ, ರಮೇಶ ಪಾಟೀಲ, ಗುಂಡು ಪಾಟೀಲ, ವೈಜನಾಥ್ ಗೋಜೆಕರ್, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು, ಧಾನು ಪಾಟೀಲ, ರಮೇಶ ಪಾಟೀಲ, ಗುಂಡು ಪಾಟೀಲ, ಬಿ ವಾಯ್ ಪಾಟೀಲ, ನೂರ್ ತಹಶಿಲ್ದಾರ, ನಿಯಾಜ ಬುಕಾರಿ, ಬಾಬುಸಾಬ ಸನದಿ, ಶಕೀಲ ಜಮಾದಾರ, ಮಲೀಕ್ ಜಮಾದಾರ, ಹಸನ್ ಮುಲ್ಲಾ, ದಸ್ತಗೀರ್ ತಹಶಿಲ್ದಾರ, ನಿಯಾಜ ಮುಲ್ಲಾ, ಪಿಡಿಓ ಪ್ರಕಾಶ ಕುಡಚಿ, ಸ್ನೇಹಲ್ ಲೋಹಾರ, ಮಲ್ಲಪ್ಪ ಪಾಟೀಲ, ಮಾರುತಿ ಹುರಕಡ್ಲಿ, ರಾಮನಿಂಗ ಕರ್ಲೆಕರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ದೇವಸ್ಥಾನದ ಕಮೀಟಿಯವರು ಉಪಸ್ಥಿತರಿದ್ದರು.
“ಗ್ರಾಮದಲ್ಲಿ ಸುಮಾರು 75 ವರ್ಷಗಳಿಂದ ಹಿಂದೂ ಧರ್ಮದ ಹೂಡಾ ದೇವಿ ಎಂಬ ದೇವಸ್ಥಾನವಿದೆ. ಅದರ ಪಕ್ಕದಲ್ಲಿ ಮುಸ್ಲಿಂರ ಮಸೀದಿಯು ಕೂಡ ಇದೆ. ಈ ಗ್ರಾಮದಲ್ಲಿ ಹಿಂದೂ - ಮುಸ್ಲಿಂರು ಸಹೋದರರ ರೀತಿಯಲ್ಲಿ ಜೀವನ ನಡೆಸುತ್ತ ಬಂದಿದ್ದಾರೆ. ಯಾರೋ ಕಿಡಿಗೇಡಿಗಳು ಹೂಡಾ ದೇವಸ್ಥಾನದ ಜಾಗ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಎಂದು ಹಿಂದೂ-ಮುಸ್ಲಿಂ ಜನರ ಮಧ್ಯೆ ಗಲಭೆಯನ್ನೆಬ್ಬಿಸಿ ಗ್ರಾಮದ ನೆಮ್ಮದಿಯನ್ನು ಹಾಳು ಮಾಡಿದ್ದರು. ಈ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿ ಹಿಂದೂ-ಮುಸ್ಲಿಂ ಮುಖಂಡರನ್ನು ಕರೆದು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ತಿಳಿಸಿ ಸಂಧಾನವನ್ನು ಮಾಡಿದ್ದೇನೆ”– ಲಕ್ಷ್ಮಿ ಹೆಬ್ಬಾಳಕರ್, ಶಾಸಕರು
Our Social media Link’s:
Face book: https://www.facebook.com/ Pragativahini/
Twitter : http://www.twitter.com/ PragatiVahini
Telegram: https://t.me/pragativahini
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ