ಭಾರೀ ಜನಸ್ತೋಮದ ಮಧ್ಯೆ ಹಿರೇಬಾಗೇವಾಡಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಶಕ್ತಿ ಪ್ರದರ್ಶನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪ್ಪಟ ಸ್ವಾಭಿಮಾನಿಗಳ ನಾಡು ಎಂದೇ ಹೆಸರಾಗಿರುವ ಹಿರೇಬಾಗೇವಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಸಂಜೆ ಭರ್ಜರಿ ರೋಡ್ ಶೋ ನಡೆಯುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.
ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋ ಗೆ ಚಾಲನೆ ನೀಡಿದ ಹೆಬ್ಬಾಳಕರ್, ಕಳೆದ 5 ವರ್ಷದಲ್ಲಿ ನಾನು ಮಾಡಿರುವ ಕೆಲಸಗಳನ್ನು ನೋಡಿ ಮತ ನೀಡಿ. ಹಿರೇಬಾಗೇವಾಡಿಯ ಮೊಮ್ಮಗಳಾದ ನನ್ನನ್ನು ಇಲ್ಲಿಯ ಜನರು ಯಾವತ್ತೂ ಬೆಂಬಲಿಸುತ್ತ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಪ್ರತ್ಯೇಕ ತಾಲೂಕನ್ನಾಗಿಸುವ ಸಂಕಲ್ಪ ಮಾಡಿದ್ದೇನೆ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಮುಂದಕ್ಕೆ ಹೋಗುತ್ತೇನೆ ಎಂದು ಹೇಳಿದರು.
ಹಿರೇಬಾಗೇವಾಡಿ ಸೇರಿದಂತೆ ಇಡೀ ಕ್ಷೇತ್ರಾದ್ಯಂತ ಜನರು ಸ್ವಯಂ ಪ್ರೇರಣೆಯಿಂದ ನನ್ನ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಕ್ಷೇತ್ರದ ಜನರೇ ನನ್ನ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಹಿರೇಬಾಗೇವಾಡಿ ಜನರನ್ನು ದಿಕ್ಕು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಗ್ರಾಮಕ್ಕೆ ಯಾರೂ ಅನ್ಯಾಯ ಮಾಡಲು ಬಿಡುವುದಿಲ್ಲ. ಇಲ್ಲಿಯ ಜನರು ಸ್ವಾಭಿಮಾನಿಗಳಾಗಿದ್ದು, ಎಲ್ಲವನ್ನೂ ಗಮನಿಸುತ್ತಿದ್ದೀರಿ ಎಂದು ಗೊತ್ತಿದೆ. ಇಡೀ ಗ್ರಾಮದ ಸಮಗ್ರ ಅಭಿವೃದ್ಧಿಗೆ ಯೋಜನೆ ಹಾಕಿಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು.
ಈ ಸಮಯದಲ್ಲಿ ವಿಧಾನಪರಿಷತ್ ಸದಸ್ಯ ನಾಗರಾಜ ಯಾದವ, ಗ್ರಾಮದ ಹಿರಿಯರು, ಸಿ ಸಿ ಪಾಟೀಲ, ಸುರೇಶ ಇಟಗಿ, ಅಡಿವೇಶ ಇಟಗಿ, ಸ್ವಾತಿ ಇಟಗಿ, ನಾಝರಿನ್ ಕರಿದಾವಲ್, ಗೌಸ್ ಜಾಲಿಕೊಪ್ಪ, ಶ್ರೀಕಾಂತ ಮಧುಭರಮಣ್ಣವರ, ಬಸನಗೌಡ ಪಾಟೀಲ, ಸಿದ್ದು ಪಾಟೀಲ, ನಿಂಗಪ್ಪ ತಳವಾರ, ಸೈಯದ್ ಸನದಿ, ಕತಾಲ್ ಗೊವೆ, ಶಿಪು ಹಳಮನಿ, ಇಮ್ತಿಯಾಜ್ ಕರಿದಾವಲ್, ಸಮೀರ ದೇವಲಾಪೂರ, ಶಬ್ಬೀರ ಸತ್ತಿಗೇರಿ, ಉಳವಪ್ಪ ರೊಟ್ಟಿ, ಸಿ ಬಿ ಶಿಂತ್ರಿ, ನಿಂಗಪ್ಪ ತಳವಾರ, ಬಿ ಜಿ ವಾಲಿಇಟಗಿ, ಆರ್ ಬಿ ಪಾಟೀಲ, ಗ್ರಾಮದ ಎಲ್ಲ ಪ್ರಮುಖರು, ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ