GIT add 2024-1
Beereshwara 33

 *ಮೃಣಾಲ್‌ ಸ್ವಾಭಿಮಾನಿ ಜಿಲ್ಲೆಯ ಧ್ವನಿಯಾಗಿ ಕೆಲಸ ಮಾಡಲಿದ್ದಾನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

Anvekar 3
Cancer Hospital 2

​ 

ಬೈಲಹೊಂಗಲ ಕ್ಷೇತ್ರದಲ್ಲಿ ಸಚಿವರಿಂದ ಮತಬೇಟೆ


ಪ್ರಗತಿವಾಹಿನಿ ಸುದ್ದಿ: ಕಳೆದ ಬಾರಿ 25 ಜನ ಬಿಜೆಪಿ ಸಂಸದರಿದ್ದರೂ ರಾಜ್ಯಕ್ಕೆ​  ಆಗುತ್ತಿದ್ದ ಅನ್ಯಾಯ​ದ​ ವಿರುದ್ಧ ಧ್ವನಿ ಎತ್ತ​ಲು ವಿಫಲರಾದರು‌. ಜನರ ಸಂಕಷ್ಟಕ್ಕೆ ಹಾಗೂ ರಾಜ್ಯದ ಧ್ವನಿಯಾಗಿ ಕೆಲಸ ಮಾಡುವ ಸಂಸದ ನಮಗೆ ಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೈಲಹೊಂಗಲದ ವಿಧಾನಸಭಾ ಕ್ಷೇತ್ರದ ಮುರಗೋಡ,​ ಮಲ್ಲಮ್ಮನ ಬೆಳವಡಿ ಹಾಗೂ ಬೈಲಹೊಂಗಲ ಪಟ್ಟಣದ ನಯಾ ಮೊಹಲ್ಲದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಪರ ಸಚಿವರು ಮತಯಾಚಿಸಿದರು.

ಜನರ‌ ಸಂಕಷ್ಟಕ್ಕೆ ಸ್ಪಂದಿಸುವವರೂ ನಮಗೆ ಬೇಕು, ಜಗದೀಶ್ ಶೆಟ್ಟರ್ ಅವರಿಂದ ಜಿಲ್ಲೆಯ ಅಭಿವೃದ್ಧಿ ಅಸಾಧ್ಯ. ಬೆಳಗಾವಿ ಸ್ವಾಭಿಮಾ​ನಿ ಜಿಲ್ಲೆ, ಪರಕೀಯರಿಗೆ, ಹೊರಗಿನವರಿಗೆ‌ ಇಲ್ಲಿ ಅವಕಾಶ ಇಲ್ಲ. ನಾವು ನಮ್ಮ ಜಿಲ್ಲೆಯನ್ನು ಬೇರೆಯವರಿಗೆ ಬಿಟ್ಟು ಕೊಡಲು‌ ಸಾಧ್ಯವಿಲ್ಲ ಎಂದರು.

Emergency Service

ಕಾಂಗ್ರೆಸ್ ಸೇರಿದ ಮೇಲೆ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದ‌ ಜಗದೀಶ್ ಶೆಟ್ಟರ್, ಈಗ ಮೋದಿ ಅವರನ್ನು ಪ್ರಧಾನಿ ಮಾಡಬೇಕು. ಮೋದಿ ನೋಡಿ ಮತ ಕೋಡಿ ಅಂತ ಕೇಳುತ್ತಾ ಇದ್ದಾರೆ. ಜಿಲ್ಲೆಗೆ ಅಷ್ಟೊಂದು ಅನ್ಯಾಯ ಮಾಡಿ, ಈಗ ದಿಢೀರ್ ಬೆಳಗಾವಿ ಕರ್ಮಭೂಮಿ ಅಂತ ಹೇಳುತ್ತಿದ್ದಾರೆ. ನಮ್ಮ ಜಿಲ್ಲೆಗೆ ಅವರ ಕೊಡುಗೆ ಏನು ಎಂ​ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು. 

ಭಾರತ ದೇಶ ಹುಟ್ಟಿ ಐದು ಸಾವಿರ ವರ್ಷಗಳಾಯಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ಮೇಲಾಯಿತು. ಆದರೆ, ಬಿಜೆಪಿಯವರು‌ ಹೇಳುವುದನ್ನು ನೋಡಿದರೆ 10‌ ವರ್ಷಗಳ‌‌ ಹಿಂದೆ ದೇಶ ಹುಟ್ಟಿದೆ ಅಂತಿದ್ದಾರೆ. 2016ರಲ್ಲಿ ಮಾಡಿದ ನೋಟ್ ಅಮಾನ್ಯೀಕರಣದಿಂದ ಸಣ್ಣ ಪುಟ್ಟ ಜನರು ತುಂಬಾ ತೊಂದರೆ ಅನುಭವಿಸಿದರು​ ಎಂದು ಸಚಿವರು ಟೀಕಿಸಿದರು.

ಈ‌ ವೇಳೆ ಮಾತನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್, ಮೃಣಾಲ್‌ ಹೆಬ್ಬಾಳಕರ್ ಇ​ನ್ನೂ ಯುವಕನಿದ್ದು, ಅವರ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಕೂಡ ಸಚಿವರಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಭಾವನಾತ್ಮಕ ಅಸ್ತೃದಿಂದ ಎರಡು ಬಾರಿ ಚುನಾವಣೆ ಗೆದ್ದಿರುವ ಮೋದಿಗೆ ಈ ಬಾರಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವರು ಹೇಳಿದರು.

ಈ ವೇಳೆ ಶಾಸಕ ಮಹಾಂತೇಶ್ ಕೌಜಲಗಿ, ​ ಮುಖಂಡರಾದ ಮಹಾಂತೇಶ್ ಮತ್ತಿಕೊಪ್ಪ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕಾರ್ತಿಕ್ ಪಾಟೀಲ್, ಜುಬೇರ್ ಗೋಕಾಕ್, ರೋಹಿಣಿ‌ ಬಾಬಾ ಸಾಹೇಬ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರುದ್ರ ಹಟ್ಟಿಹೊಳಿ, ಮಲ್ಲಪ್ಪ ಮುರುಗೋಡ್, ಅನಿಲ್ ಮೇಕನಮರಡಿ,  ಗೀತಾ ತಾಯಿ ದೇಸಾಯಿ, ಸಂಕೇತ ಹಟ್ಟಿಹೊಳಿ, ಮಹಾದೇವಿ ಮಬ್ಬೂನೂರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Laxmi Tai add
Bottom Add3
Bottom Ad 2