GIT add 2024-1
Beereshwara 33

*ಹುಕ್ಕೇರಿ ಕ್ಷೇತ್ರದಲ್ಲಿ ಶಾಸಕ ನಿಖಿಲ ಕತ್ತಿ ಬಿರುಸಿನ ಪ್ರಚಾರ*

Anvekar 3
Cancer Hospital 2

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಿ ನಿಖಿಲ ಕತ್ತಿ

ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ ಕ್ಷೇತ್ರದ ಎಲಿಮುನ್ನೊಲಿ,ಸುಲ್ತಾನಪುರ, ಬಸ್ತವಾಡ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರಾರ್ಥವಾಗಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಚಾರ ಸಭೆಯನ್ನು ನಿಖಿಲ ಕತ್ತಿ ಹಾಗೂ ಶಶಿಕಲಾ ಜೊಲ್ಲೆ ಯವರು ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Emergency Service

ನಿಖಿಲ ಕತ್ತಿ ಮಾತನಾಡಿ, ಭಾರತ ದೇಶದ ಮೊದಲಿನ ಸ್ಥಿತಿ ಹಾಗು ಇವತ್ತಿನ ಸ್ಥಿತಿ ನೋಡಿದರೆ ದೇಶ ತುಂಬಾ ಬಲಿಷ್ಠವಾಗಿದೆ. ದೇಶದ ಆಂತರಿಕ ಹಾಗೂ ಬಾಹ್ಯ ರಕ್ಷಣೆ,ಸೈನಿಕರ ರಕ್ಷಣೆ,ಕೃಷಿ ಭದ್ರತೆ ಹಾಗೂ ಮಹಿಳಾ ಭದ್ರತೆ ಸೇರಿದಂತೆ ಎಲ್ಲ ರೀತಿಯಲ್ಲೂ ಸಶಕ್ತವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ರಷ್ಯಾ ಹಾಗೂ ಯುಕ್ರೇನ್ ಯುದ್ಧದ ಸಂದರ್ಭದಲ್ಲಿ ಅಲ್ಲಿ ಸಿಲುಕಿದ ಭಾರತೀಯರನ್ನು ಕರೆತರುವ ಮೂಲಕ ಮೋದಿಯವರು ಭಾರತ ದೇಶದ ಶಕ್ತಿ ಎಂತದ್ದು ಎಂದು ಜಗತ್ತಿಗೆ ಗೊತ್ತಿರುವ ಸಂಗತಿ.


ಚಿಕ್ಕೋಡಿ ಕ್ಷೇತ್ರದಲ್ಲಿ ಮೂಲಸೌಕರ್ಯ ರಸ್ತೆ,ಹಾಗೂ ಹಲವಾರು ಕೇಂದ್ರದ ಸರಕಾರದ ಯೋಜನೆಗಳನ್ನು ತಲುಪಿಸಲು ಸಂಸದರು ಪ್ರಯತ್ನಿಸಿದ್ದಾರೆ.ಅದಕ್ಕಾಗಿ 2 ನೇ ಬಾರಿಗೆ ಚಿಕ್ಕೋಡಿಯಿಂದ ಬಿಜೆಪಿ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಶೋಕ ಪಟ್ಟಣಶೆಟ್ಟಿ, ಈರಣ್ಣಾ ಹೂಗಾರ, ಸೌ.ಪ್ರಮಿಳಾ ಬಡಮಲ್ಲನ್ನವರ,ಅಜ್ಜಪ್ಪಾ ಕಲ್ಲಟ್ಟಿ, ಬಸವಂತಪ್ಪ ರಡ್ಡಿ, ಗುರಸಿದ್ದ ಮಗದುಮ, ಶಿವಾಜಿ ಬಾರಿಗಿಡದ,ಶಶಿವಾನಂದ ಮಗದುಮ,ಸ್ಥಳೀಯ ಮುಖಂಡರು ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Laxmi Tai add
Bottom Add3
Bottom Ad 2