Belagavi NewsBelgaum NewsKarnataka NewsLatestPolitics

*ಬಾಕಿ ಇರುವ ಒಂದು ಸಚಿವ ಸ್ಥಾನ: ಮೂವರಲ್ಲಿ ಯಾರ ತಕ್ಕಡಿ ಮೇಲಾಗುತ್ತೆ ನೋಡೋಣ ಎಂದ ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಸಿಎಂ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಒಂದು ಸಚಿವ ಸ್ಥಾನ ಮಾತ್ರ ಖಾಲಿ ಇದ್ದು, ಖಾಲಿ ಇರುವ ಒಂದು ಮಹಿಳಾ ಸಚಿವ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಉಮಾಶ್ರೀ, ಗಾಯತ್ರಿ ಶಾಂತೇಗೌಡ ಈ ಸ್ಥಾನದಲ್ಲಿ ರೇಸ್​ನಲ್ಲಿದ್ದಾರೆ. ಮೂವರಲ್ಲಿ ಯಾರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂದು ದೇ ಸದ್ಯಕ್ಕಿರುವ ಕುತೂಹಲ.

ಇದೇ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದಾರೆ. ಬೆಳಗಾವಿಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳೆಯರು ಬರೋವರೆಗೆ ಮುಖ್ಯಮಂತ್ರಿಗಳು ನಿರ್ವಹಣೆ ಮಾಡುತ್ತಾರೆ. ಯಾರನ್ನು ಮಾಡಬೇಕು ಎಂಬ ಗೊಂದಲ ಇರುವುದರಿಂದ ವಿಳಂಬ ಆಗುತ್ತಿದೆ. ಎಲ್ಲರೂ ಸಮರ್ಥರಿದ್ದಾರೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಪ್ರಶ್ನೆ ಇದೆ. ಪಕ್ಷ ಮೂವರಲ್ಲಿ ಯಾರನ್ನು ಮಾಡುತ್ತದೆಯೋ, ಅವರ ಪರವಾಗಿ ನಾವು ನಿಲ್ಲುತ್ತೇವೆ ಎಂದರು.

ಇರುವ ಒಂದು ಸ್ಥಾನಕ್ಕೆ ಯಾರಿಗೆ‌‌ ಮಂತ್ರಿ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ಆಗುತ್ತಿದೆ. ಅಧಿವೇಶನ ಮುಗಿದ ಮೇಲೆ ಶಾಸಕಿಯೊಬ್ಬರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂದು ಸಮರ್ಥಿಸಿಕೊಂಡರು.

ಸಚಿವ ಜಮೀರ ಅಹಮದ್ ಧ್ವಜಾರೋಹಣಕ್ಕೆ ಹಿಂದೇಟು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಬಿಎಂಪಿ ಚುನಾವಣೆ ವಿಚಾರದ ಬಗ್ಗೆ ಅವರು ಪತ್ರದಲ್ಲಿ ಬರೆದಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದ ಅವರು, ಬಿಜೆಪಿಯವರ ಆರೋಪದ ವಿಚಾರಕ್ಕೆ ತಮ್ಮ ಕಚೇರಿಯಲ್ಲಿಯೇ ಬಿಜೆಪಿಯವರು ಧ್ವಜ ಹಾರಿಸುವುದಿಲ್ಲ. ನಮ್ಮ ಮೇಲೆ ಆರೋಪ ಮಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ. 70 ವರ್ಷಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ಆಗಿವೆ. ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಅಭಿಪ್ರಾಯಪಟ್ಟರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button