Belagavi NewsBelgaum NewsKarnataka NewsLatestPolitics

*ಕಷ್ಟದಲ್ಲೂ ಸಾಧನೆ ಮಾಡಿ ರಾಷ್ಟ್ರಕ್ಕೇ ದಾರಿದೀಪವಾದ ಅಂಬೇಡ್ಕರ್ ನಮಗೆಲ್ಲ ಆದರ್ಶ: ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಅತ್ಯಂತ ಕಷ್ಟದಲ್ಲೂ ಸಾಧನೆ ಮಾಡಿ ಇಡೀ ರಾಷ್ಟ್ರಕ್ಕೆ ಅತ್ಯುತ್ತಮ ಸಂವಿಧಾನ ನೀಡಿ ದಾರಿದೀಪವಾದವರು. ಅವರು ನಮಗೆಲ್ಲ ಆದರ್ಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಶುಕ್ರವಾರ ಸಂಜೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ದೇಸೂರ್ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭವ್ಯ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು.

ಅಂಬೇಡ್ಕರ್ ಅವರು ಬದುಕಿದ್ದ ಸಂದರ್ಭದಲ್ಲಿ ಅಸ್ಪೃಷ್ಯತೆಯಂತಹ ಅನಿಷ್ಟ ಪದ್ಧತಿ ಜೀವಂತವಿತ್ತು, ಬಡತನವಿತ್ತು. ಈಗಿನಂತೆ ಯಾವುದೇ ಸೌಲಭ್ಯಗಳಿರಲಿಲ್ಲ. ಆದರೆ ಕಷ್ಟಗಳನ್ನೆಲ್ಲ ಮೆಟ್ಟಿ ನಿಂತು ಬೆಳೆದವರು ಅವರು. ಬಸವಣ್ಣ, ಅಂಬೇಡ್ಕರ್, ಶಿವಾಜಿ ಎಲ್ಲರೂ ಇಡೀ ವಿಶ್ವಕ್ಕೇ ಆದರ್ಶರಾಗಿ ಬಾಳಿದವರು. ಅಂತವರ ಪುತ್ಥಳಿಗಳನ್ನು ಎಲ್ಲ ಕಡೆ ಸ್ಥಾಪಿಸುವ ಮೂಲಕ ಮುಂದಿನ ಪೀಳಿಗೆಗೆ ಅವರ ತತ್ವ, ಸಿದ್ಧಾಂತಗಳನ್ನು ಹಸ್ತಾಂತರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Home add -Advt

ಬೆಳಗಾವಿ ಗ್ರಾಮೀಣ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸುವ ನನ್ನ ಸಂಕಲ್ಪಕ್ಕೆ ನೀವೆಲ್ಲ ಕೈಜೋಡಿಸಬೇಕು. ನಿಮ್ಮ ಮನೆ ಮಗಳೆಂದು ತಿಳಿದು ಆಯ್ಕೆ ಮಾಡಿ ರಾಜ್ಯದ ಸೇವೆ ಮಾಡುವ ಅವಕಾಶ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ಸಹ ನನ್ನೊಂದಿಗೆ ನಿಲ್ಲುವ ಮೂಲಕ ಕ್ಷೇತ್ರವನ್ನು, ರಾಜ್ಯವನ್ನು ಇನ್ನಷ್ಟು ಅಭಿವೃದ್ದಿಪಡಿಸೋಣ ಎಂದರು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ಬಾಳು ದೇಸೂರಕರ್, ಮಲ್ಲೇಶ್ ಚೌಗುಲೆ, ಮಹೇಶ ಕೋಲಕಾರ, ಗುಂಡು ತಳವಾರ, ಗಿರಿಯಪ್ಪ ಕೋಲಕಾರ, ರೋಹಿತ್ ತಳವಾರ, ದೌಲತ್ ಕೋಲಕಾರ, ಅರ್ಜುನ ಕಾಂಬಳೆ, ಲಕ್ಷ್ಮಣ ಛತ್ರೆ, ರಮೇಶ ಕೋಲಕಾರ, ಕಸ್ತೂರಿ, ಲಕ್ಷ್ಮೀ ಪಾಟೀಲ, ಕಾಶವ್ವ ಕಾಂಬಳೆ, ನಿಕಿತಾ ಸುತಾರ್, ಸಾತೇರಿ ಕಳಸೇಕರ್, ವಿದ್ಯಾ ಸತ್ಯಯಗೋಳ, ಬಿಬಿಜಾನ್ ನಾಯಿಕವಾಡಿ, ಶಂಕರ ಕೋಲಾಕಾರ, ಧೂಳಪ್ಪ ಕೋಲಕಾರ, ರಮೇಶ ಗೊದಲ್ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button