Belagavi NewsBelgaum NewsKarnataka NewsLatestPolitics

*ದೇಸೂರಿನಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ‌ ಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ದೇಸೂರ್ ಗ್ರಾಮದಲ್ಲಿ ಸುಮಾರು 3 ಕೋಟಿ ರೂಪಾಯಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವರು, ಮಹಿಳೆಯಿಂದ ಏನು ಆಗುತ್ತದೆ, ಮಹಿಳೆ ಗೆಲ್ಲಲು ಯೋಗ್ಯವಿಲ್ಲ ಎಂದು ಮಾಜಿ ಶಾಸಕರು ಇದೇ ಊರಲ್ಲಿ ಚುನಾವಣೆಗೆ ಮುನ್ನ ನನ್ನ ಬಗ್ಗೆ ವ್ಯಂಗ್ಯವಾಡಿದ್ದರು. ಆದರೆ ನಿಮ್ಮೆಲ್ಲರ ಆಶಿರ್ವಾದದಿಂದ ಗೆದ್ದು ಕಳೆದ 7 ವರ್ಷದಲ್ಲಿ ದೇಸೂರಿನಲ್ಲಿ 12 ರಿಂದ 15 ಕೋಟಿ ರೂಪಾಯಿ ಕಾಮಗಾರಿ ಮಾಡಿಸಿದ್ದೇನೆ ಎಂದರು.

ಯಾವುದೇ ರೀತಿಯ ರಾಜಕೀಯ ಮಾಡದೆ ನಿರಂತರವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಎಂದು ಸಚಿವರು ಹೇಳಿದರು.

Home add -Advt

ಈ ವೇಳೆ ಮಾತನಾಡಿದ ಕಾಡಾ ಅಧ್ಯಕ್ಷ ಯುವರಾಜ ಕದಂ, 3 ವರ್ಷದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು 3 ಸಾವಿರ ಕೋಟಿ ಕೋಟಿ ರೂ ಕಾಮಗಾರಿ ತಂದಿದ್ದಾರೆ. ನುಡಿದಂತೆ ನಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದರು‌.

ಈ ವೇಳೆ ಮುಖಂಡರಾದ ಸಾತೇರಿ ಕಳಸೇಕರ್, ಭರಮ ಪಾಟೀಲ್, ಅನಿಲ ಪಾಟೀಲ್, ಬಾಳು ದೇಸೂರಕರ, ಲಕ್ಷ್ಮಿ ಪಾಟೀಲ್, ಕಾಶವ್ವ ಕಂಬಳಿ, ವಿದ್ಯಾ ಮಾನವಾಡಕರ, ನಿಖಿತಾ ಸುತಾರ, ಸಂತೋಷ ಮರಗಾಳಿ, ಸತೀಶ ಚವ್ಹಾಣ, ದವಲತ ಕೊಲಕಾರ, ಸುಭಾಶ ಪಾರಿಟ್, ವೆಂಕಟ ಪಾಟೀಲ್, ಪಕ್ಷ ಸೇರ್ಪಡೆ ಆದ ಎಲ್ಲ ಕಾರ್ಯಕರ್ತರು ಇದ್ದರು.

Related Articles

Back to top button