
ಪ್ರಗತಿವಾಹಿನಿ ಸುದ್ದಿ: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಪ್ರಸಾದವನ್ನು ಸುರೇಂದ್ರ ಹೆಗ್ಗಡೆಯವರು ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸಹೋದರ ಸುರೇಂದ್ರ ಹೆಗ್ಗಡೆಯವರ ಮೂಲಕ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ ಕಳುಹಿಸಿದ್ದು, ಭಾನುವಾರ ಸಂಜೆ ಸುರೇಂದ್ರ ಹೆಗ್ಗಡೆಯವರು ಆಸ್ಪತ್ರೆಗೆ ಆಗಮಿಸಿ ಸಚಿವರಿಗೆ ಪ್ರಸಾದ ವಿತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ