Belagavi NewsBelgaum NewsKarnataka NewsLatestPolitics

*ಶಿವಾಜಿಯನ್ನು ಪೂಜಿಸುವ ಜೊತೆಗೆ ಆದರ್ಶ ಪಾಲಿಸಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ನಾವು ಶಿವಾಜಿ ಮಹಾರಾಜರನ್ನು ಪೂಜಿಸುವ ಜೊತೆಗೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.


ಖನಗಾಂವ ಕೆ.ಎಚ್ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿಯ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸ್ಥಳದ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.


ಧರ್ಮ, ಭಾಷೆ, ಜಾತಿ ಯಾವುದೂ ಅಡ್ಡಿಯಾಗದೇ ಜನರ ಸುರಕ್ಷತೆ, ಸ್ವಾಭಿಮಾನ ಮತ್ತು ಸ್ವರಾಜ್ಯ – ಇವು ಶಿವಾಜಿಯವರ ಆಡಳಿತದ ಮೂಲ ತತ್ವಗಳು. ನಾನು ಕೂಡ ಯಾವುದೇ ಭದ ಭಾವವಿಲ್ಲದೆ ಜನರ ಸೇವೆ ಮಾಡುತ್ತಿದ್ದೇನೆ. ಇಂದು ಈ ಮೂರ್ತಿ ನಮ್ಮ ನಡುವೆ ನಿಲ್ಲುವಾಗ, ಇದು ಕೇವಲ ಕಲ್ಲಿನ ಶಿಲ್ಪವಲ್ಲ, ಇದು ಯುವಕರಿಗೆ ಪ್ರೇರಣೆ, ಆಡಳಿತಗಾರರಿಗೆ ಪಾಠ, ಜನರಿಗೆ ಆತ್ಮಗೌರವದ ಸಂಕೇತ. ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಲ್ಲುವುದು, ಸಾರ್ವಜನಿಕ ಸಂಪತ್ತನ್ನು ಕಾಪಾಡುವುದು, ಮಹಿಳೆಯರಿಗೆ ಗೌರವ ನೀಡುವುದು, ರಾಷ್ಟ್ರದ ಏಕತೆಯನ್ನು ಕಾಪಾಡುವುದು ಇವೇ ಶಿವಾಜಿಯ ನಿಜವಾದ ಸಂದೇಶ ಎಂದು ಸಚಿವರು ಹೇಳಿದರು.

Home add -Advt

ಅರಿಸಿನ-ಕುಂಕುಮ :

ಖನಗಾಂವ ಬಿ.ಕೆ. ಗ್ರಾಮದಲ್ಲಿ ನಮ್ಮ ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಪ್ರತಿಬಿಂಬಿಸುವ ಭವ್ಯ ‘ಅರಿಶಿನ-ಕುಂಕುಮ’ ಕಾರ್ಯಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮ.ನಿ.ಪ್ರ ಶ್ರೀ ಶಿವಮೂರ್ತಿ ದೇವರು ಅರಳಿಕಟ್ಟಿ, ಶ್ರೀಶೈಲ ಸ್ವಾಮಿಗಳು, ರಾಜು ಸುಳೇಭಾವಿ ಸಾಮಿಗಳು, ಮಹೇಶ ಪಾಟೀಲ, ಬಾಬಾಜಿ ಕರಡಿ, ಬಸ್ಸು ಯಳ್ಳೂರಕರ, ಶಂಕರಗೌಡ ಪಾಟೀಲ, ಯಲ್ಲಪ್ಪ ಬುಡ್ರಿ, ಬಾಳು ಕುರುಬರ್, ನಾಗೇಶ ದೇಸಾಯಿ, ಫಕೀರವ್ವ ಅಂಬರಾಪುರ, ಭರತ ಪಾಟೀಲ, ರಂಜನಾ ಗಿರಿಯಾಲ್ಕರ್, ಬಾಳು ಪಾಟೀಲ, ಮಹೇಶ್ ಸುಗಣೆನ್ನವರ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button