Belagavi NewsBelgaum NewsKarnataka NewsPolitics

*ದೇವಸ್ಥಾನಕ್ಕೆ ಅನುದಾನ ಮಂಜೂರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ: ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗುರುವಾರ ಸನ್ಮಾನಿಸಿ, ಧನ್ಯವಾದ ಸಮರ್ಪಿಸಲಾಯಿತು.


ದೇವಸ್ಥಾನ ನಿರ್ಮಾಣಕ್ಕೆ ಮೊದಲನೇ ಕಂತಿನಲ್ಲಿ 25 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿ ಕೊಡಲಾಗಿದ್ದು, ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಸಚಿವರಿಗೆ ಗೌರವ ಸನ್ಮಾನ ಮಾಡಲಾಯಿತು.

ಉಳಿದ ಕಂತಿನ ಹಣವನ್ನೂ ಆದಷ್ಟು ಬೇಗ ಬಿಡುಗಡೆಗೊಳಿಸುವುದಾಗಿ ತಿಳಿಸಿದ ಸಚಿವರು, ಉಪಕಾರ ಸ್ಮರಣೆಗಾಗಿ ದೇವಸ್ಥಾನ ಸಮಿತಿಯವರಿಗೆ ಧನ್ಯವಾದ ಸಲ್ಲಿಸಿದರು. ಎಲ್ಲರೂ ಕೈ ಜೋಡಿಸಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಕ್ಷೇತ್ರದ ಜನರು ನಿರಂತರವಾಗಿ ಜೊತೆಗೆ ನಿಂತಲ್ಲಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಸಾಧ್ಯ ಎಂದರು.

Home add -Advt

ಈ ವೇಳೆ ಶಂಕರಗೌಡ ಪಾಟೀಲ, ನಿಲೇಶ ಚಂದಗಡ್ಕರ್, ವಸಂತರಾವ ಜಾಧವ್, ಪ್ರಭಾಕರ್ ಹುಲಕುಂದ, ಪ್ರವೀಣ ಮುರಾರಿ, ರೇಣುಕಾ ಕರವಿನಕೊಪ್ಪ, ಕಲ್ಲಪ್ಪ ಧರೆಣ್ಣವರ, ನಾಗೇಶ ದೇಸಾಯಿ, ಉಮೇಶ್ ದೇಶಪಾಂಡೆ, ಗಣಪತಿ ಬಾಲಣ್ಣವರ್, ಸುರೇಶ ಪಗಡಿ, ರಾಮಣ್ಣ ರಾಮಚನ್ನವರ್ ಉಪಸ್ಥಿತರಿದ್ದರು‌.

Related Articles

Back to top button