
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಾನುವಾರ ಬೆಳಗ್ಗೆಯಿಂದ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪೂಜೆ ನೆರವೇರಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಮಧ್ಯಾಹ್ನ ವಿವಿಧ ಶಿವ ಮಂದಿರಗಳಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು.
ಹಿಂಡಲಗಾ ಜಯನಗರದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ, ಸಹ್ಯಾದ್ರಿ ನಗರದಲ್ಲಿರುವ ಮಹಾಬಳೇಶ್ವರ ದೇವಸ್ಥಾನದಲ್ಲಿ, ಹಿಂಡಲಗಾ ಗ್ರಾಮದ ಶ್ರೀ ಕಲ್ಮೇಶ್ವರ ಮಂದಿರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಾಪ್ರಸಾದ ಸೇವೆಯಲ್ಲಿ ಪಾಲ್ಗೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಭಕ್ತಾಧಿಗಳಿಗೆ ಪ್ರಸಾದವನ್ನು ಉಣಬಡಿಸಿದರು.
ನಂತರ ಮಹಾಶಿವರಾತ್ರಿಯ ಪ್ರಯುಕ್ತ ಫ್ರೀಡಂ ಪೈಟರ್ಸ್ ಕಾಲೋನಿಯ ಶಿವಾಲಯಕ್ಕೆ ತೆರಳಿ ದರ್ಶನ ಆಶೀರ್ವಾದ ಪಡೆದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಪ್ರಸಾದವನ್ನು ಸ್ವೀಕರಿಸಿದರು.
*ಡಿ.ರೂಪಾ ಆರೋಪಕ್ಕೆ ಮೌನಮುರಿದ ರೋಹಿಣಿ ಸಿಂಧೂರಿ; ಕೇಸ್ ದಾಖಲಿಸಲು ನಿರ್ಧಾರ*
https://pragati.taskdun.com/rohini-sindhurireactiond-roopa/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ