Latest

ಭಾರತದ ಅತಿ ದೊಡ್ಡ ಲಾಲೂಸ್ ಮಾಲ್ ಗೆ ಚಾಲನೆ; 2 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಲಾಲೂಸ್ ಗ್ರುಪ್ ಭಾರತದ ಅತಿ ದೊಡ್ಡ ಮಾಲ್ ಒಂದನ್ನು ಉತ್ತರ ಪ್ರದೇಶದ ಲಕ್ನೋದಲ್ಲಿ ನಿರ್ಮಿಸಿದ್ದು  ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನೂತನ ಮಳಿಗೆ ಉದ್ಘಾಟಿಸಿದ್ದಾರೆ.

2 ಸಾವಿರ ಕೋಟಿ ರೂ. ವೆಚ್ಚದಲ್ಲಿ 22 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ  ನಿರ್ಮಾಣ ಮಾಡಲಾಗಿರುವ ಈ ಮಾಲ್ ನಲ್ಲಿ 7ಲಕ್ಷ ಚದರ ಅಡಿಯಲ್ಲಿ 11 ಹಂತಗಳು ಪಾರ್ಕಿಂಗ್ ಗೆ ಮೀಸಲಿವೆ. ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡುವ 220 ಮಳಿಗೆಗಳು ಇದರಲ್ಲಿವೆ. 1600 ಜನ ಈ ಮಾಲ್ ನಲ್ಲಿ  ಏಕಕಾಲಕ್ಕೆ ಖರೀದಿಯಲ್ಲಿ ತೊಡಗಬಹುದಾಗಿದೆ.  ಇದು ಲಾಲೂಸ್ ಗ್ರುಪ್ ನ 235ನೇ ಮಳಿಗೆಯಾಗಿದೆ. 

ಈ ಮಾಲ್ ನಿರ್ಮಾಣದಿಂದ 4800 ಜನರಿಗೆ ನೇರ ಉದ್ಯೋಗಾವಕಾಶ ಹಾಗೂ ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ಪರೋಕ್ಷ ಉದ್ಯೋಗಾವಕಾಶ ಲಭಿಸಿದೆ.

ಮುಂದಿನ ಹಂತದ ಯೋಜನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿ ಹಾಗೂ ಪ್ರಯಾಗರಾಜ್ ನಲ್ಲಿ ಸುಸಜ್ಜಿತ  ಮಾಲ್ ನಿರ್ಮಾಣ ಮಾಡುವುದು ತಮ್ಮ ಗುರಿಯಾಗಿದೆ. ಇದಕ್ಕಾಗಿ ಭೂಮಿಯನ್ನು ಸಹ ಗುರುತಿಸಲಾಗಿದೆ ಎಂದು ಲಾಲೂಸ್ ನ ಮಾರ್ಕೆಟಿಂಗ್ ಮತತು ಕಮ್ಯುನಿಕೇಶನ್ (ಜಾಗತಿಕ) ವಿಭಾಗದ ವ್ಯವಸ್ಥಾಪಕ ನಂದಕುಮಾರ್ ಕೆ. ತಿಳಿಸಿದ್ದಾರೆ.

ಪ್ರವಾಹ ಭೀತಿ; ರೆಡ್ ಅಲರ್ಟ್ ಘೋಷಣೆ; ಶಾಲಾ-ಕಾಲೇಜುಗಳಿಗೆ ರಜೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button