Latest

ಸಾವಿರ ಕೋಟಿ ವಂಚನೆ ಮಾಡಿ ಈರುಳ್ಳಿ ಮಾರುತ್ತಿದ್ದ ಖದೀಮ

ನಾಸಿಕ್ – ಬರೋಬ್ಬರಿ ೧ ಸಾವಿರ ಕೋಟಿ ವಂಚನೆ ಮಾಡಿದ ಖದೀಮನೊಬ್ಬ ತಲೆ ಮರೆಸಿಕೊಳ್ಳಲು ಈರುಳ್ಳಿ ಮಾರುತ್ತಿದ್ದ. ಆದರೆ ಈತ ಚಾಪೆ ಕೆಳಗೆ ನುಸುಳಿದರೆ ರಂಗೋಲಿಯಡಿ ನುಸುಳಿದ ಪೊಲೀಸರು ನಾಸಿಕ್‌ನಲ್ಲಿ ಈ ಮಹಾ ವಂಚಕನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಪಿಯೂಷ್ ತಿವಾರಿ ಅಲಿಯಾಸ್ ಪುನೀತ್ ಭಾರದ್ವಾಜ್ (೪೨) ಎಂಬುವವನೇ ಈ ನಟೋರಿಯಸ್ ವಂಚಕ. ಪಂಜಾಬ್, ನೋಯ್ಡಾ ಮತ್ತು ಉತ್ತರ ಪ್ರದೇಶದಲ್ಲಿ ಒಟ್ಟು ೩೦ಕ್ಕೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತನನ್ನು ಹುಡುಕಿಕೊಟ್ಟವರಿಗೆ ೫೦ ಸಾವಿರ ಬಹುಮಾನ ಸಹ ಘೋಷಿಸಲಾಗಿತ್ತು.

ನೋಯ್ಡಾ ನಿವಾಸಿಯಾಗಿದ್ದ ಆರೋಪಿ ಪಿಯೂಷ್ ತಿವಾರಿ ಜನರಿಗೆ ವಿವಿಧ ಅಪಾರ್ಟ್‌ಮೆಂಟ್‌ಗಳಲ್ಲಿ ಪ್ಲ್ಯಾಟ್ ನೀಡುವುದಾಗಿ ಹಣ ಪಡೆದು ವಂಚಿಸಿದ್ದ. ಅಲ್ಲದೇ ಒಂದೇ ಮನೆಯನ್ನು ಹತ್ತಾರು ಜನರಿಗೆ ನಕಲಿ ದಾಖಲೆಗಳ ಮೂಲಕ ಮಾರುತ್ತಿದ್ದ. ಈತನ ವಂಚನೆಯ ಕೃತ್ಯಕ್ಕೆ ಈತನ ಪತ್ನಿ ಶಿಖಾ ಸಹ ಭಾಗಿಯಾಗಿದ್ದಳು.

ಬಳಿಕ ಪಿಯೂಷ್ ತಿವಾರಿ ತಲೆ ಮರಸಿಕೊಂಡು ನಾಸಿಕ್‌ಗೆ ಪಲಾಯನ ಮಾಡಿದ್ದ. ನಾಸಿಕ್‌ನಲ್ಲಿ ಪುನೀತ್ ಭಾರದ್ವಾಜ್ ಎಂಬ ಹೆಸರಿನಲ್ಲಿ ಈರುಳ್ಳಿ ವ್ಯಾಪಾರ ಮಾಡುತ್ತಿದ್ದ. ಆದರೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಳೆದ ಕೆಲ ವಾರಗಳಿಂದ ಪುನೀತ್ ಭಾರದ್ವಾಜ್‌ನ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದರು. ಕೊನೆಗೂ ಪಿಯೂಷ್ ತಿವಾರಿಯೇ ಪುನೀತ್ ಭಾರದ್ವಾಜ್ ಎಂಬುದು ನಾಸಿಕ್‌ನ ಪೊಲೀಸರಿಗೆ ಖಚಿತವಾಗಿದ್ದು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Home add -Advt

ಯೋಗಿ ಕ್ಯಾಬಿನೇಟ್‌ನಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು

https://pragati.taskdun.com/latest/tamilnaduex-ministerarresthasana-2/

Related Articles

Back to top button