ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋವಾ- ಬೆಳಗಾವಿ ಮಾರ್ಗದ ಅನಮೋಡ ಘಟ್ಟದಲ್ಲಿ ಸೋಮವಾರ ಭಾರೀ ಪ್ರಮಾಣದ ಗುಡ್ಡ ಕುಸಿತದಿಂದ ಹಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಬೆಳಿಗ್ಗೆಯಿಂದ ಸುರಿದ ಭಾರೀ ಮಳೆಗೆ ಬೃಹತ್ ಮರಗಳ ಸಹಿತ ವ್ಯಾಪಕ ಪ್ರಮಾಣದ ಗುಡ್ಡದ ಮಣ್ಣು ರಸ್ತೆಗೆ ಜಾರಿ ಬಂತು. ಇದೇ ವೇಳೆ ಘಟ್ಟದಲ್ಲಿ ಲಾರಿಯೊಂದು ಸಂಚರಿಸುತ್ತಿದ್ದು ಅದರ ಸನಿಹವೇ ಗುಡ್ಡ ಕುಸಿತಕ್ಕೊಳಗಾಯಿತು. ಅದೃಷ್ಟವಶಾತ್ ಲಾರಿಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಹಲವು ಗಂಟೆಗಳ ಕಾಲ ಬೆಳಗಾವಿ- ಗೋವಾ ಮಧ್ಯೆ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು. ಸುದೀರ್ಘ ವೇಳೆಯ ಕಾರ್ಯಾಚರಣೆ ನಂತರ ಮಾರ್ಗದಲ್ಲಿ ಬಿದ್ದ ಮಣ್ಣು, ಮರಗಳನ್ನು ತೆರವುಗೊಳಿಸಿದ್ದರೂ ಯಾವ ಸಂದರ್ಭದಲ್ಲಿ ಮತ್ತೆ ಕುಸಿತ ಉಟಾಗುವುದೆಂದು ಹೇಳಲಾಗದ ಸ್ಥಿತಿ ನಿರ್ಮಾಣವಾಗಿದೆ.
ಇದೇ ವೇಳೆ ಭೀಕರ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿದ್ದುದನ್ನು ತೀರ ಸನಿಹದಿಂದ ಅಪಾಯಕಾರಿ ಸನ್ನಿವೇಶವನ್ನೂ ಕಡೆಗಣಿಸಿ ಕೆಲವರು ಚಿತ್ರೀಕರಣ ಮಾಡುತ್ತಿದ್ದ ವಿಡಿಯೋ ತುಣುಕುಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ 7,70000 ರೂಪಾಯಿ ವಂಚನೆ; ಖತರ್ನಾಕ್ ಆರೋಪಿ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ