
ಪ್ರಗತಿವಾಹಿನಿ ಸುದ್ದಿ, ಬಂಟ್ವಾಳ: ಅವ್ಯಾಹತ ಮಳೆಗೆ ಗುಡ್ಡ ಕುಸಿದು ಮೂವರು ಮೃತಪಟ್ಟಿದ್ದಾರೆ.
ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಈ ದುರ್ಘಟನೆ ನಡೆದಿದೆ.
ಮೃತರು ಕೇರಳದಿಂದ ರಬ್ಬರ್ ತೋಟದ ಕೆಲಸಕ್ಕಾಗಿ ಆಗಮಿಸಿದ್ದು ಇವರನ್ನು ಕೊಟ್ಟಾಯಂನ ಬಾಬು (46) , ಪಾಲಕ್ಕಾಡ್ ನ ವಿಜು (46) ಮತ್ತು ಸಂತೋಷ ಅಲ್ಫಾನ್ಸೋ ಎಂದು ಗುರುತಿಸಲಾಗಿದೆ. ಕಣ್ಣುರು ನಿವಾಸಿ ಜಾನ್ ಎಂಬಾತನನ್ನು ರಕ್ಷಿಸಲಾಗಿದ್ದು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಬ್ಬರ್ ತೋಟ ಹೆನ್ರಿ ಕಾರ್ಲೊ ಎಂಬುವವರಿಗೆ ಸೇರಿದ್ದು ಇಲ್ಲಿರುವ ಗುಡ್ಡಕ್ಕೆ ಹೊಂದಿಕೊಂಡ ಶೆಡ್ ಒಂದರಲ್ಲಿ ಐವರು ಕಾರ್ಮಿಕರು ವಾಸವಾಗಿದ್ದರು. ಭಾರೀ ಮಳೆಗೆ ಗುಡ್ಡ ಕುಸಿತಕ್ಕೊಳಗಾಗಿ ನಾಲ್ವರು ಗುಡ್ಡದ ಮಣ್ಣಿನಡಿ ಸಿಲುಕಿಕೊಂಡಿದ್ದರು. ಈ ಪೈಕಿ ಮೂವರನ್ನು ಜೆಸಿಬಿ ಮೂಲಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಬ್ಬ ಮಾತ್ರ ಸ್ಥಳದಲ್ಲೇ ಮೃತಪಟ್ಟಿದ್ದ. ಇಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಂಟ್ವಾಳ ಅಗ್ನಿಶಾಮಕ ದಳದವರು ಮತ್ತು ಎನ್ ಡಿಆರ್ ಎಫ್ ತಂಡದವರು ಕಾರ್ಯಾಚರಣೆ ನಡೆಸಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.
2 ಸಾವಿರ ಕೋಟಿ ವೆಚ್ಚದಲ್ಲಿ ಪೊಲೀಸರಿಗೆ ಮನೆಗಳ ನಿರ್ಮಾಣ -ಸಚಿವ ಆರಗ ಜ್ಞಾನೇಂದ್ರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ