Belagavi NewsBelgaum NewsKannada NewsKarnataka NewsLatest

ಬಿಸಿಸಿಐ ಡೆವಲಪ್ ಮೆಂಟ್ ಪ್ಯಾನೆಲ್ ಗೆ ಭರ್ಜರಿ ಜಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಚುನಾವಣೆಯಲ್ಲಿ ಡೆವಲಪ್ ಮೆಂಟ್ ಪ್ಯಾನೆಲ್ ಭರ್ಜರಿ ಜಯ ಸಾಧಿಸಿದೆ.

ಇಂಡಸ್ಟ್ರೀ ವಿಭಾಗದಿಂದ ನಡೆದ ಚುನಾವಣೆಯಲ್ಲಿ ಸಂದೀಪ್ ಬಾಗೇವಾಡಿ 258 ಮತಗಳನ್ನು, ಉದಯ್ ಜೋಶಿ 252 ಮತಗಳನ್ನು ಮತ್ತು ರಾಜೇಶ್ ಮುಚ್ಚಂಡಿಕರ್ 245 ಮತಗಳನ್ನು ಪಡೆದರು. ಅವರ ಎದುರಾಳಿ ಅಶೋಕ್ ಕೋಳಿ ಕೇವಲ 69 ಮತಗಳನ್ನು ಗಳಿಸಿದರು.

Home add -Advt

ಟ್ರೇಡಿಂಗ್ ಸೆಕ್ಟರ್ ನಲ್ಲಿ ಡೆವಲಪ್ ಮೆಂಟ್ ಪ್ಯಾನೆಲ್ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾದರು. ಸಂಜೀವ್ ಕತ್ತಿಶೆಟ್ಟಿ, ಸ್ವಪ್ನಿಲ್ ಶಾ, ಪ್ರಶಾಂತ್ ಕಳ್ಳಿಮನಿ, ಮನೋಜ್ ಮತ್ತಿಕೊಪ್ಪ ಮತ್ತು ರಮೇಶ್ ಲದ್ದಡ್ ಅವರು ಆಯ್ಕೆಯಾದರು. ಅದೇ ರೀತಿ ವಾರ್ಷಿಕ (ಸಾಮಾನ್ಯ) ಸದಸ್ಯ ವಿಭಾಗದಲ್ಲಿ ಸುಧೀರ ಚೌಗುಲೆ ಅವಿರೋಧವಾಗಿ ಆಯ್ಕೆಯಾದರು.

ಚೈತನ್ಯ ಕುಲಕರ್ಣಿ, ಸಚಿನ್ ಸಬ್ನಿಸ್ ಮತ್ತು ಸುನಿಲ್ ನಾಯಕ್ ಅವರು BCCI ಅಭಿವೃದ್ಧಿ ಸಮಿತಿಯ ಪರವಾಗಿ ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

Related Articles

Back to top button