
ರೈಲ್ವೆ ಹಳಿ ಮೇಲೆ ಭೂ ಕುಸಿತ -ಹಲವು ರೈಲು ಸಂಚಾರದಲ್ಲಿ ವ್ಯತ್ಯಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೂಧಸಾಗರ ಮತ್ತು ಸೋನಾಲಿಯಂ ಮಧ್ಯೆ ರೈಲ್ವೆ ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಇದರಿಂದಾಗಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಾಣಿಸಿಕೊಂಡಿದೆ.
ಇಂದು ಸಂಜೆ 5 ಗಂಟೆ ವೇಳೆಗೆ ಭೂ ಕುಸಿತ ಉಂಟಾಗಿದೆ. ಇದರಿಂದಾಗಿ ವಾಸ್ಕೋಡ ಗಾಮಾ -ಹಜರತ್ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿನ ಮಾರ್ಗ ಬದಲಿಸಿ ಮಡಗಾಂವ್ಸ ರೋಹಾ, ಪನವೇಲ್, ಕಲ್ಯಾಣ, ಮನಮಾಡ್ ಮೂಲಕ ಓಡಿಸಲಾಗಿದೆ.
ಹುಬ್ಬಳ್ಳಿ -ಲೋಂಡಾ/ ನಿಜಾಮುದ್ದೀನ್ ಲಿಂಕ್ ಎಕ್ಸಪ್ರೆಸ್ ಧಾರವಾಡದಲ್ಲಿ ನಿಲ್ಲಿಸಲಾಗಿದೆ. ವಾಸ್ಕೋಡಗಾಮಾ -ಬೆಳಗಾವಿ ಪ್ಯಾಸೆಂಜರ್ ರೈಲನ್ನು ಕುಲೆಂ ನಲ್ಲಿ ನಿಲ್ಲಿಸಲಾಗಿದೆ. ವಾಸ್ಕೋಡಗಾಮಾ -ಕೆಎಸ್ ಆರ್ ಬೆಂಗಳೂರು ಸ್ಲೀಪರ್ ಕೋಚ್ ರೈಲನ್ನು ಮಡಗಾಂವ್ ನಲ್ಲಿ ನಿಲ್ಲಿಸಲಾಗಿದೆ.
ರೈಲ್ವೆ ಹಳಿ ಮೇಲಿನ ಮಣ್ಣನ್ನು ಸ್ವಚ್ಚಗೊಳಿಸುವ ಕಾರ್ಯ ನಡೆಯುತ್ತಿದೆ. ಇಂದು ರಾತ್ರಿ ಅಥವಾ ನಾಳೆ ಮಾರ್ಗ ಸುಗಮವಾಗಬಹುದೆನ್ನುವ ನಿರೀಕ್ಷೆ ರೈಲ್ವೆ ಇಲಾಖೆಯದ್ದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ