Latest

ಲತಾ ಅವರ ಧ್ವನಿಯಲ್ಲಿನ ಆ ಹಾಡು ಕೇಳಿದರೆ ಇಂದಿಗೂ ಕಣ್ಣೀರು ಬರುತ್ತೆ, ದೇಶ ಭಕ್ತಿ ಉಕ್ಕಿ ಹರಿಯುತ್ತೆ…

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ ದೇಶಕ್ಕೆ ಆಘಾತ ತಂದಿದೆ. ಎಲ್ಲಿಯವರೆಗೆ ಈ ಭೂಮಿಯ ಮೇಲೆ ಸಂಗೀತ ಇರುತ್ತೋ ಅಲ್ಲಿಯವರೆಗೂ ಅವರ ಹೆಸರು ಚಿರಸ್ಥಾಯಿಯಾಗಿರುತ್ತೆ. ಎಲ್ಲರ ಹೃದಯದಲ್ಲಿ ಅವರು ನೆಲೆಸಿರುತ್ತಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾವೆಲ್ಲರೂ ಲತಾ ಮಂಗೇಶ್ಕರ್ ಅವರ ಹಾಡಿಗಳನ್ನು ಕೇಳಿಕೊಂಡು ಬೆಳೆದವರು. ದೇಶದ ಒಂದಿಲ್ಲೊಂದು ಭಾಗದಲ್ಲಿ ಲತಾ ಅವರ ಹಾಡು ಸದಾ ಕೇಳುತ್ತಲೇ ಇರುತ್ತದೆ. ಸಿನಿಮಾ ಹಾಡುಗಳು ಮಾತ್ರವಲ್ಲ, ಭಕ್ತಿಗೀತೆ, ಭಜನೆ, ದೇಶ ಭಕ್ತಿಗೀತೆಗಳ ಮೂಲಕ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದ್ದರು. ಅವರ ಆವೊಂದು ಹಾಡು ಕೇಳಿದರೆ ಇಂದಿಗೂ ಕಣ್ಣೀರು ಬರುತ್ತೆ, ದೇಶ ಭಕ್ತಿ ಉಕ್ಕಿ ಹರಿಯುತ್ತೆ, ಅಷ್ಟು ಪ್ರೇರಣಾದಾಯಕವಾಗಿ ಅವರು ಹಾಡಿದ್ದಾರೆ ಎಂದು ಹೇಳಿದರು.

ಕನ್ನಡದಲ್ಲಿಯೂ ಅವರ ಹಾಡುಗಳು ಜನಪ್ರಿಯತೆ ಪಡೆದಿವೆ. ಭಾರತದ ಗಾನ ಕೋಗಿಲೆ ಇಂದು ಹಾಡು ನಿಲ್ಲಿಸಿರುವುದು ನೋವು ತಂದಿದೆ. ಲತಾ ಮಂಗೇಶ್ಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

ಲತಾ ಮಂಗೇಶ್ಕರ್ ಅವರ ಹಾಡುಗಳು ಕೇವಲ ಸಿನಿಮಾಗೆ ಮಾತ್ರ ಸೀಮಿತವಲ್ಲ. ಲತಾ ಅವರ ಕಂಠ ಸಿರಿಯಲ್ಲಿ ಮೂಡಿ ಬಂದ ’ಯೇ ಮೇರೆ ವತನ್ ಕೆ ಲೋಗೋ…’ ಹಾಡು ಕೇಳದವರೇ ಇಲ್ಲ. ಈ ಒಂದು ಹಾಡು ಭಾವಪರವಶತೆ, ದೇಶಭಕ್ತಿಗೆ ಪ್ರೇರಣದಾಯವಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಲತಾ ಮಂಗೇಶ್ಕರ್ ಅವರ ಈ ಹಾಡನ್ನು ಸ್ಮರಿಸಿದ್ದಾರೆ.
ರಾಷ್ಟ್ರಾದ್ಯಂತ 2 ದಿನ ಶೋಕಾಚರಣೆ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button