Belagavi NewsBelgaum NewsKarnataka News

*ಜಯಂತಿಗಳ ಅರ್ಥಪೂರ್ಣ ಆಚರಣೆಗೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರದ ನಿರ್ದೇಶನದಂತೆ ಫೆಬ್ರುವರಿ 1 ರಂದು ಶ್ರೀ ಮಡಿವಾಳ ಮಾಚಿದೇವ ಜಯಂತಿ, ಫೆ.04 ರಂದು ಶ್ರೀ ಸವಿತಾ ಮಹರ್ಷಿ ಜಯಂತಿ ಹಾಗೂ ಫೆ. 10 ರಂದು ಶ್ರೀ ಕಾಯಕ ಶರಣರ ಜಯಂತಿಯನ್ನು ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಅರ್ಥಾಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜ.18) ನಡೆದ ವಿವಿಧ ಜಯಂತಿಗಳ ಆಚರಣೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೇದಿಕೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶಿಷ್ಟಾಚಾರದನ್ವಯ ಮುದ್ರಿಸಿ ಜನಪ್ರತಿನಿಧಿಗಳು ಹಾಗೂ ಗಣ್ಯರುಗಳಿಗೆ ಸಾಕಷ್ಟು ಮುಂಚಿತವಾಗಿ ತಲುಪಿಸಬೇಕು. ಯಾವುದೇ ಕಾರಣಕ್ಕೂ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು ಎಂದು ತಿಳಿಸಿದರು.

ತಾಲೂಕು ಮಟ್ಟದಲ್ಲಿ ಜಯಂತಿ ಆಚರಣೆಗೆ ತಹಶೀಲ್ದಾರ್ ಹಂತದಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು. ಸಂಭಂದಿಸಿದ ತಹಶೀಲ್ದಾ‌ರ್ ಅವರನ್ನು ಭೇಟಿ ಮಾಡಿ ಜಯಂತಿ ಆಚರಣೆಗೆ ಅನುದಾನ ಬಳಸುವ ಕುರಿತು ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಫೆಬ್ರುವರಿ 1 ರಂದು ನಡೆಯಲಿರುವ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದೆ. ಅದೇ ರೀತಿಯಲ್ಲಿ ಫೆ.04 ರಂದು ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆ ಹಾಗೂ ಫೆ. 10 ರಂದು ಶ್ರೀ ಕಾಯಕ ಶರಣರಾದ ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಮಾದರ ದೊಳಯ್ಯ, ಸಮಗಾರ ಹರಳಯ್ಯರ ಜಯಂತಿ ಆಚರಣೆ ಮಾಡಲಾಗುವುದು ಎಂದು ಎಂದು ಹೇಳಿದರು.

ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ಕಾಯಕ ಶರಣರ ವಚನ ಸಾಹಿತ್ಯಗಳ ಮಾಹಿತಿಯಿರುವ ಓರ್ವ ನುರಿತ ಸಂಪನ್ಮೂಲ ವ್ಯಕ್ತಿಯನ್ನು ಉಪನ್ಯಾಸ ನೀಡಲು ನೇಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ತಿಳಿಸಿದರು.

ಸಭೆಯಲ್ಲಿ ಎಸಿಪಿ ಸದಾಶಿವ ಕಟ್ಟಿಮನಿ, ಶಿವಶರಣ ಶ್ರೀ ಮಡಿವಾಳ ಮಾಚಯ್ಯ ಸಮಾಜದ ಮುಖಂಡರಾದ ಸದಾನಂದ ಸಾಳುಂಕೆ, ಅಶೋಕ ಜಾದವ, ವಿ.ಎಂ ಮಡಿವಾಳರ ಹಾಗೂ ಶ್ರೀ ಸವಿತಾ ಮಹರ್ಷಿ ಸಮಾಜದ ಮುಖಂಡರಾದ ಪುಂಡಲೀಕ ರಾಯಚೂರು, ಆನಂದ ವಡವಾಟ ಮತ್ತು ಕಾಯಕ ಶರಣರ ಸಮಾಜದ ಮುಖಂಡರಾದ ಭೀಮರಾಯ ಪವಾರ, ವಿಶಾಲ ಪೋಳ, ಸುಬ್ರಹ್ಮಣ್ಯಂ ಕಾಂಬಳೆ, ಮಹಾದೇವ ತಳವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button