
ಸಂತ್ರಸ್ಥರಿಗೆ ಹಾಲುಗ್ಗಿ ಉಣಿಸಿದ ಹುಕ್ಕೇರೀಶ
ಪ್ರಗತಿವಾಹಿನಿ ಸುದ್ದಿ, ಯಡೂರ :
ಚಿಕ್ಕೋಡಿ ಸಮೀಪದ ಯಡೂರು ಸುಕ್ಷೇತ್ರದಲ್ಲಿ ತೆರೆಯಲಾದ ಗಂಜಿ ಕೇಂದ್ರಕ್ಕೆ ತೆರಳಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾವಿರಾರು ಸಂತ್ರಸ್ತರಿಗೆ ಹಾಲುಗ್ಗಿ, ಅನ್ನ, ಸಾರು ಉಣಿಸಿ ಸಂತೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಯಡೂರು ಸುಕ್ಷೇತ್ರ ಧಾರಾಕಾರ ಮಳೆಯಿಂದ ಪೂರ್ಣಪ್ರಮಾಣದಲ್ಲಿ ಜಲಾವೃತಗೊಂಡು ಸಾಕಷ್ಟು ಜನರಿಗೆ ತೊಂದರೆಯಾಗಿದೆ. ಶ್ರೀಶೈಲ ಜಗದ್ಗುರುಗಳ ಕೃಪೆ ಎಲ್ಲರ ಮೇಲೆ ಇದೆ.
ಎಲ್ಲ ಸಂತ್ರಸ್ಥರು ಸಮಾಧಾನದಿಂದ ಇದ್ದು ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಶ್ರೀಗಳು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ