Advertisement -Home Add
Crease wise (28th Jan)
KLE1099 Add

ಬೆಳಗಾವಿಯಲ್ಲಿ ಕೋವಿಡ್ ಗೆ 90 ಶಿಕ್ಷಕರು ಬಲಿ

ಬೈ ಎಲಕ್ಷನ್ ಕರ್ತವ್ಯದಲ್ಲಿ ಭಾಗಿಯಾಗಿದ್ದ 10 ಶಿಕ್ಷಕರ ಸಾವು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಸೋಂಕಿಗೆ ಇದುವರೆಗೆ ಬರೋಬ್ಬರಿ 90 ಶಿಕ್ಷಕರು ಬಲಿಯಾಗಿದ್ದಾರೆ. ಅದರಲ್ಲಿ ಲೋಕಸಭಾ ಉಪಚುನಾವಣೆ ಕರ್ತವ್ಯದಲ್ಲಿ ಭಾಗಿಯಾಗಿದ್ದ 10 ಶಿಕ್ಷಕರು ಕೋವಿಡ್ ಗೆ ಸಾವನ್ನಪ್ಪಿದ್ದಾರೆ ಎಂದು ಡಿಡಿಪಿಐ ಎ.ಬಿ.ಪುಂಡಲೀಕ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯೊಂದರಲ್ಲೇ ಇದುವರೆಗೆ ಕೊರೊನಾ ಸೋಂಕಿಗೆ 90 ಶಿಕ್ಷಕರು ಮೃತಪಟ್ಟಿದ್ದಾರೆ. ಮೊದಲ ಅಲೆಯಲ್ಲಿ 23 ಶಿಕ್ಷಕರು ಹಾಗೂ 2ನೇ ಅಲೆಯಲ್ಲಿ 20 ಶಿಕ್ಷಕರು ಸಾವನ್ನಪ್ಪಿದ್ದಾರೆ. ಅದರಲ್ಲಿ ಚಿಕ್ಕೋಡಿಯಲ್ಲಿ ಮೊದಲ ಅಲೆಯಲ್ಲಿ 18 ಹಾಗೂ 2ನೇ ಅಲೆಯಲ್ಲಿ 29 ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ 20 ಶಿಕ್ಷಕರಲ್ಲಿ 10 ಶಿಕ್ಷಕರು ಲೋಕಸಭಾ ಉಪಚುನಾವಣೆಯಲ್ಲಿ ಭಾಗಿಯಾಗಿದ್ದರು ಎಂದು ವಿವರಿಸಿದ್ದಾರೆ.
ಯಾರಿಗೆ ಬ್ಲ್ಯಾಕ್ ಫಂಗಸ್ ಬರುತ್ತೆ ಗೊತ್ತಾ…?