Advertisement -Home Add

ಡ್ರಗ್ಸ್ ಪ್ರಕರಣ; ಸ್ಟಾರ್ ದಂಪತಿ ನ್ಯಾಯಾಂಗ ಬಂಧನಕ್ಕೆ

ಡ್ರಗ್ಸ್ ಸೇವನೆ ಒಪ್ಪಿಕೊಂಡ ಹಾಸ್ಯ ನಟಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಖ್ಯಾತ ಹಾಸ್ಯ ನಟಿ ಭಾರ್ತಿ ಸಿಂಗ್ ಹಾಗೂ ಆಕೆಯ ಪತಿ ಹರ್ಷ ಲಿಂಬಾಚಿಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ನಿನ್ನೆ ಎನ್ ಸಿಬಿ ಅಧಿಕಾರಿಗಳು ನಟಿ ಭಾರ್ತಿ ಸಿಂಗ್ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 86.5 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾರ್ತಿ ಸಿಂಗ್ ಹಾಗೂ ಆಕೆಯ ಪತಿ ಹರ್ಷ ಇಬ್ಬರನ್ನು ಬಂಧಿಸಿದ್ದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು.

ವಿಚಾರಣೆ ವೇಳೆ ಸ್ಟಾರ್ ದಂಪತಿಗಳು ಮಾದಕವಸ್ತು ಸೇವನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದರು. ಇದೀಗ ಇಬ್ಬರನ್ನು ನ್ಯಾಯಾಧೀಶ ಮುಂದೆ ಹಾಜರುಪಡಿಸಲಾಗಿದ್ದು, ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.