Karnataka News

*ಮರಣೊತ್ತರ ಪರೀಕ್ಷೆ ತಿರುಚಿ ಲಂಚಕ್ಕೆ ಬೇಡಿಕೆ: ವೈದ್ಯ ಸೇರಿ ಇಬ್ಬರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮರಣೋತ್ತರ ವರದಿ ತಿರುಚಿ ನೀಡಿ ಎಂದು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ಸೇರಿ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಹಾವೇರಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗುರುರಾಜ್ ಬಿರಾದಾರ ಹಾಗೂ ಮಧ್ಯವರ್ತಿ ಚನ್ನಬಸವಯ್ಯ ಕುಲಕರ್ಣಿ ಬಂಧಿತ ಆರೋಪಿಗಳು.

Home add -Advt

ಹಾವೇರಿ ನಗರದ ಚಿರಾಯು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ವಂದನಾ ತುಪ್ಪದ ಎಂಬ ಬಾಲಕಿ ಚಿಕಿತ್ಸೆ ಸಮಯದಲ್ಲಿ ಮೃತಪಟ್ಟಿದ್ದಳು. ಈ ಬಗ್ಗೆ ಹಾವೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಾಲಕಿ ಮರಣೋತ್ತರ ಪರೀಕ್ಷೆ ಬಳಿಕ ಡಾ.ಗುರುರಾಜ್ ಚಿರಾಯು ಆಸ್ಪತ್ರೆ ಸಂಪರ್ಕಿಸಿ ಆಸ್ಪತ್ರೆ ಪರವಾಗಿ ಉಪಕಾರಪೂರ್ಣ ವರದಿ ನೀಡುತ್ತೇನೆ. 5 ಲಕ್ಷ ಲಂಚ ನೀಡಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ ಆಸ್ಪತ್ರೆ ನಿರಾಕರಿಸಿದೆ.

ಬಳಿಕ ಮಧ್ಯವರ್ತಿ ಚನ್ನಬಸವ ಮೂಲಕ ಮತ್ತೆ ಸಂಪರ್ಕಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆ ವ್ಯವಸ್ಥಾಪಕ ಮಲ್ಲೇಶಪ್ಪ ಮುಪ್ಪಣ್ಣ ಮಾಸಣಗಿ ನೀಡಿದ ದೂರಿನ ಹಿನ್ನೆಲೆಯಲ್ಲಿ 3 ಲಕ್ಷ ಲಂಚದೊಂದಿಗೆ ವೈದ್ಯ ಗುರುರಾಜ್ ಹಾಗೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ.


Related Articles

Back to top button