KLE1099 Add

ಕೋವಿಡ್ ಲಸಿಕೆ ಪಡೆಯುತ್ತಿದ್ದಂತೆ ಎದ್ದು ಓಡಾಡಿದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ

ಕೋವಿಶೀಲ್ಡ್ ನಿಂದ ಗಾಯಾಳು ಗುಣಮುಖ

Beereshwara 6

ಪ್ರಗತಿವಾಹಿನಿ ಸುದ್ದಿ; ಜಾರ್ಖಂಡ್: ಅಪಘಾತದಲ್ಲಿ ಗಾಯಗೊಂಡು 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಯೋರ್ವ ಕೋವಿಡ್ ಲಸಿಕೆ ಪಡೆದುಕೊಳ್ಳುತ್ತಿದ್ದಂತೆ ಗುಣಮುಖನಾಗಿ ಎದ್ದು ಓಡಾಡಿದ ಘಟನೆ ಜಾರ್ಖಂಡ್ ರಾಜ್ಯದ ಸಾಲ್ಘಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕೊರೊನ ಲಸಿಕೆ ಎಂದರೆ ಹಲವು ಗ್ರಾಮಸ್ಥರು ಭಯಗೊಂಡು ಓಡಿ ಹೋಗುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ಲಸಿಕೆ ಪಡೆದುಕೊಂಡ ಕೆಲ ದಿನಗಳಲ್ಲೇ ಸಂಪೂರ್ಣ ಗುಣಮುಖರಾಗಿದ್ದು ಅಚ್ಚರಿಗೆ ಕಾರಣವಗಿದೆ.

ದುಲಾರ್ ಚಂದ್ ಮುಂಡಾ ಎಂಬ ವ್ಯಕ್ತಿ ಅಪಘಾತಕ್ಕೀಡಾಗಿ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಇತ್ತೀಚೆಗೆ ಕೋವಿಶೀಲ್ಡ್ ಮೊದಲ ಡೋಸ್ ನೀಡಲಾಗಿತ್ತು. ಆಶ್ಚರ್ಯವೆಂದರೆ ಲಸಿಕೆ ತನ್ನ ಕೆಲಸ ಆರಂಭಿಸಲು ಶುರು ಮಾಡಿದಂತೆ ಅವರು ಗುಣಮುಖರಾಗಿ ಎದ್ದು ನಡೆದಾಡಲು, ಮಾತನಾಡಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

 

You cannot copy content of this page