Reporter wanted
Crease wise (28th Jan)

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ, ಬಾಂದಾರ್ ಕಾಮಗಾರಿಗಳಿಗೆ ಚಾಲನೆ

ಜಾಂಬೋಟಿ -ಕುಟ್ಟಲವಾಡಿ ರಸ್ತೆ ಕಾಮಗಾರಿಗೆ ಚಾಲನೆ, ಬಾಂದಾರ್ ಹಾಗೂ ಕಾಲುವೆಗಳ ಕಾಮಗಾರಿಗೆ ಚಾಲನೆ

ಜಾಂಬೋಟಿ -ಕುಟ್ಟಲವಾಡಿ ರಸ್ತೆ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ,​ ಬೆಳಗಾವಿ -​ 75 ಲಕ್ಷ ರೂ. ವೆಚ್ಚದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುಟ್ಟಲವಾಡಿ ಗ್ರಾಮದ ರಸ್ತೆಯನ್ನು ಸುಧಾರಿಸುವ  ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಚಾಲನೆ ನೀಡಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅನುಪಸ್ಥಿತಿಯಲ್ಲಿ ಜಾಂಬೋಟಿ ಮುಖ್ಯ ರಸ್ತೆಯಿಂದ ಕುಟ್ಟಲವಾಡಿ ಗ್ರಾಮದವರೆಗಿನ ಸುಮಾರು ಒಂದು ಕಿಲೋಮೀಟರ್ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು, ಯುವರಾಜ ಕದಂ, ಚನ್ನರಾಜ ಹಟ್ಟಿಹೊಳಿ  ಸೇರಿ ಭೂಮಿ ಪೂಜೆಯೊಂದಿಗೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸುಧೀರ ದೇಸಾಯಿ, ಮಾರುತಿ, ಭರಮು ದೇಸಾಯಿ, ಮಲ್ಲಪ್ಪ ಪಾಯನ್ನಾಚೆ ಹಾಗೂ​ ​ಕಾರ್ಯಕರ್ತರು ಉಪಸ್ಥಿತರಿದ್ದರು.

ಬಾಂದಾರ್ ಹಾಗೂ ಕಾಲುವೆಗಳ ಕಾಮಗಾರಿಗೆ ಚಾಲನೆ

 ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಗೆಜಪತಿ ಹಾಗೂ ಕುಕಡೊಳ್ಳಿ ಗ್ರಾಮದ ಕೆನಾಲಿನ ಬಾಂದಾರ್ ಹಾಗೂ ಕಾಲುವೆಗಳ ಸುಧಾರಣೆಯ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಚಾಲನೆ ನೀಡಿದರು.
 ರೈತರ ಹೊಲಗಳಿಗೆ ನೀರುಣಿಸಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕೆನಾಲಿನ ಬಾಂದಾರ್ ಹಾಗೂ ಕಾಲುವೆಗಳ ಸುಧಾರಣೆಯ ಕಾಮಗಾರಿಗಳನ್ನು ಮಂಜೂರು ಮಾಡಿಸಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮೃಣಾಲ ಹೆಬ್ಬಾಳಕರ್, ಅಡಿವೇಶ ಇಟಗಿ, ಬಸನಗೌಡ ಪಾಟೀಲ, ಸಂಜು ಲಂಗೂಟಿ, ಬಸವಣ್ಣಿ ಕರವಿನಕೊಪ್ಪ, ರಾಜು ಲಂಗೂಟಿ, ಶ್ರೀಕಾಂತ್ ತಿಗಡಿ, ಗಂಗಾಧರ ಅಗಸಿಮನಿ, ಶಿವಾಜಿ ಗುಂಡಣ್ಣವರ, ವಿಶ್ವನಾಥ ಅಕ್ಕಿ, ಮಾರುತಿ ನಾವಲಗಿ, ಉಮೇಶ ಕರವಿನಕೊಪ್ಪ, ಈರಣಗೌಡ ಪಾಟೀಲ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.