Reporter wanted
Crease wise (28th Jan)

ಲಾಕ್ ಡೌನ್ ಎಫೆಕ್ಟ್: ಹೆತ್ತಮ್ಮ, ಮಗು ಸೇರಿ ಮೂವರಿಗೆ ಇರಿದ

ನಾದಿನಿಗೂ ಇರಿದು ಪರಾರಿಯಾಗಿದ್ದ ವ್ಯಕ್ತಿ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಸ್ತಿಗಾಗಿ ಹೆತ್ತ ತಾಯಿ, ನಾದಿನಿ ಹಾಗೂ ಮೂರು ವರ್ಷದ ಮಗುವಿಗೆ ಚಾಕುವಿನಿಂದ ಕತ್ತು ಸೀಳಿ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ ಗೋಪಾಲಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗೋಪಾಲಕೃಷ್ಣ ಕ್ಯಾಬ್ ಚಾಲಕನಾಗಿದ್ದು, ಕೊರೊನಾ ಲಾಕ್ ಡೌನ್ ನಿಂದಾಗಿ ಅತಿಯಾದ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.

ಜನವರಿ 16ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಾಲಮಾಡಿಕೊಂಡಿದ್ದ ಆರೋಪಿ ಆಸ್ತಿಯಲ್ಲಿ ಪಾಲು ನೀಡುವಂತೆ ಪೀಡಿಸುತ್ತಿದ್ದ. ತಾಯಿ ನಿರಾಕರಿಸಿದಾಗ ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದು, ಮಡಿವಾಳದ ಹೈಪರ್ ಮಾರ್ಕೆಟ್ ನಲ್ಲಿ ಚಾಕು ಖರೀದಿಸಿದ್ದ. ಅದೇ ಚಾಕುವಿನಿಂದ ತಾಯಿ ಕತ್ತು ಸೀಳಿ ಹತ್ಯೆಗೆ ಮುಂದಾಗಿದ್ದ, ಇದನ್ನು ಕಂಡ ನಾದಿನಿ ಗಾಬರಿಯಿಂದ ಕೋಗಿಕೊಂಡಿದ್ದರಿಂದ ಆಕೆಯನ್ನು ಚಾಕುವಿನಿಂದ ಇರಿದಿದ್ದಾನೆ. ಅಮ್ಮನ ಕಿರುಚಾಟ ಕೇಳಿ ಅಲ್ಲಿಗೆ ಬಂದ ಮೂರು ವರ್ಷದ ಮಗನಿಗೂ ಚಾಕು ಇರಿದು ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.