Beereshwara add4
Crease wise add 8
KLE1099 Add

ಮೆಗಾ ಇನ್ ವೆಸ್ಟ್‌ ಮೆಂಟ್ ಪಾರ್ಕ್ ಗಳ ಯೋಜನೆ ಅನುಷ್ಠಾನ

ಕರ್ನಾಟಕದ ದೊಡ್ಡಬಳ್ಳಾಪೂರದಲ್ಲಿ ಟೆಕ್ಸಟೈಲ ಪಾರ್ಕ ಅನುಷ್ಠಾನ ಕರ್ನಾಟಕದ ದೊಡ್ಡಬಳ್ಳಾಪೂರದಲ್ಲಿ ಟೆಕ್ಸಟೈಲ ಪಾರ್ಕ ಅನುಷ್ಠಾನ

ಪ್ರಗತಿವಾಹಿನಿ ಸುದ್ದಿ; ನವದೆಹಲಿ; ಮೆಗಾ ಇನ್ ವೆಸ್ಟ್‌ ಮೆಂಟ್ ಪಾರ್ಕ್ ಗಳ ಯೋಜನೆ ಅನುಷ್ಠಾನ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ ಅದಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ರಂದು ಕೇಂದ್ರ ಜವಳಿ ಖಾತೆ ರಾಜ್ಯ ಸಚಿವರಾದ ರಾಜ್ಯ ಸಚಿವೆ  ದರ್ಶನಾ ಜರದೋಶ ಅವರು  ಉತ್ತರ ಪೂರೈಸಿದ್ದಾರೆ.

ಕೇಂದ್ರ ಸರ್ಕಾರದ ಸ್ಕೀಮ್ ಫಾರ ಇಂಟಿಗ್ರೇಟೆಡ್ ಟೆಕ್ಸಟೈಲ್ ಪಾರ್ಕ್ ಅನುಷ್ಠಾನ ಯೋಜನೆ ಅಡಿ ದೇಶದಲ್ಲಿ ಒಟ್ಟು 66 ಜವಳಿ ಉದ್ಯಾನ(ಪಾರ್ಕ)ಗಳನ್ನು ಮಂಜೂರು ಮಾಡಲಾಗಿತ್ತು. ಇವುಗಳಲ್ಲಿ 24 ಟೆಕ್ಸಟೈಲ ಪಾರ್ಕ್ ಪೂರ್ಣಗೊಂಡಿದ್ದು, 10 ಯೋಜನೆಗಳು ರದ್ದಾಗಿದ್ದು, 32 ವಿವಿಧ ಅನುಷ್ಠಾನ ಹಂತದಲ್ಲಿವೆ. ಕರ್ನಾಟಕದಲ್ಲಿ ಗುಲಬರ್ಗಾ ಮತ್ತು ದೊಡ್ಡಬಳ್ಳಾಪೂರದಲ್ಲಿ ಜವಳಿ ಪಾರ್ಕಗೆ ಅನುಮೋದನೆ ನೀಡಲಾಗಿತ್ತಾದರೂ ಗುಲಬರ್ಗಾ ಪಾರ್ಕ ರದ್ದುಗೊಂಡಿದ್ದು, ದೊಡ್ಡಬಳ್ಳಾಪೂರದಲ್ಲಿ ಜವಳಿ ಪಾರ್ಕ ಯೋಜನೆ ಮಾರ್ಗಸೂಚಿ ಪ್ರಕಾರ ಪೂರ್ಣಗೊಂಡಿದೆ.

ಕೇಂದ್ರ ಬಜೆಟ್ 2021-22 ರಲ್ಲಿ ಮೆಗಾ ಇನ್ ವೆಸ್ಟಮೆಂಟ್ ಜವಳಿ ಉದ್ಯಾನವನಗಳ ಯೋಜನೆಯನ್ನು ಘೋಷಿಸಲಾಗಿದ್ದು, ಮುಂದಿನ 3 ವರ್ಷಗಳಲ್ಲಿ 7 ಮೆಗಾ ಜವಳಿ ಉದ್ಯಾನವನಗಳನ್ನು ದೇಶದಲ್ಲಿ ಸ್ಥಾಪಿಸಲಾಗುತ್ತಿದ್ದು, ಜವಳಿ ಸಚಿವಾಲಯವು ಉದ್ದೇಶಿತ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ಪ್ರಕ್ರಿಯೆಯಲ್ಲಿದ್ದು, ಪ್ರಸ್ತಾಪಿತ ಯೋಜನೆಗಳ ವಿಧಾನ ಅಂತಿಮಗೊಳಿಸಿ ಯೋಜನಾ ಸ್ಥಳ, ಸರ್ಕಾರದ ಧನಸಹಾಯ ರಚನೆ ಇತ್ಯಾದಿ ವಿವರಗಳನ್ನು ತೀರ್ಮಾನಿಸಲಾಗುವುದೆಂದು ಹೇಳಿದ್ದಾರೆ.

ಯೋಜನೆಯ ಮಾರ್ಗಸೂಚಿ ಪ್ರಕಾರ ಜವಳಿ ಪಾರ್ಕ್ ಸ್ಥಾಪಿಸಲು ಕನಿಷ್ಠ 25 ಎಕರೆ ಭೂಮಿ ಹೊಂದಿರುವುದು ಅವಶ್ಯವಿದ್ದು ವಿಶೇಷ ವರ್ಗದ ರಾಜ್ಯಗಳಲ್ಲಿ ಕನಿಷ್ಠ 10 ಎಕರೆ ಭೂಮಿ ಅವಶ್ಯವಿದ್ದು, ಸದರಿ ಯೋಜನೆಗಳನ್ನು ಅನುಮೋದಿಸುವಾಗ ಯೋಜನೆಯ ಆರ್ಥಿಕ ಭದ್ರತೆ ಮತ್ತು ಗಾತ್ರದ ಬಗ್ಗೆ ಕ್ಯಾಬಿನೆಟ್ ನಿರ್ಧರಿಸುವ ವಿಧಿ,ವಿಧಾನಗಳ ಶರತ್ತಿಗೊಳಪಟ್ಟು ಅನುಮೋದಿಸಲಾಗುವುದು ಎಂದು ವಿವರಿಸಿದ್ದಾರೆ.