Latest

ನಿದ್ದೆಯಿಂದ ಎಚ್ಚೆತ್ತ ಕಂದಮ್ಮ ಹೊಳೆ ನೀರಲ್ಲಿ ಕೊಚ್ಚಿ ಹೋಯ್ತು

ಪ್ರಗತಿವಾಹಿನಿ ಸುದ್ದಿ; ಉಪ್ಪುಂದ: ಪಾಲಕರು ಮನೆಯಲ್ಲಿ ಮಲಗಿಸಿ ಹೋಗಿದ್ದಾಗ ನಿದ್ದೆಯಿಂದ ಎಚ್ಚೆತ್ತ ಮಗು ಹೊಳೆ ಸಮೀಪ ಹೋಗಿ ಕಾಲು ಜಾರಿ ನೀರು ಪಾಲಾಗಿರುವ ಹೃದಯವಿದ್ರಾವಕ ಘಟನೆ ಉಪ್ಪುಂದದಲ್ಲಿ ನಡೆದಿದೆ.

ವಿಶ್ವನಾಥ್ ಖಾರ್ವಿ ಅವರ ಎರಡುವರೆ ವರ್ಷದ ಸರ್ವದ ಮೃತ ಮಗು. ಮನೆಯ ಕೋಣೆಯಲ್ಲಿ ಮಗುವನ್ನು ನಿದ್ದೆ ಮಾಡಿಸಿ ಬಳಿಕ ವಿಶ್ವನಾಥ್, ಉಪ್ಪುಂದದ ಪೇಟೆಗೆ ತೆರಳಿದ್ದರು.

Home add -Advt

ನಿದ್ದೆಯಿಂದ ಎಚ್ಚೆತ್ತ ಮಗು ಕೋಣೆಯಿಂದ ಹೊರಗೆ ಬಂದಿದೆ. ಮನೆಯಲ್ಲಿ ಯಾರೂ ಕಾಣದಿದ್ದಾಗ ಮನೆಯಿಂದ ಹೊರಗೆ ಬಂದು ಮನೆ ಸಮೀಪವೇ ಹರಿಯುತ್ತಿದ್ದ ಎಡಮಾವಿನ ಹೊಳೆ ದಡದಲ್ಲಿ ನಡೆದಾಡಿದೆ. ಈ ವೇಳೆ ಕಾಲು ಜಾರಿ ಬಿದ್ದ ಮಗು ಹೊಳೆ ನೀರುಪಾಲಾಗಿದೆ.

ನೀರಿನಲ್ಲಿ ಕೊಚ್ಚಿ ಹೋದ ಮಗುವಿನ ಶವ ಎಡಮಾವಿನ ಹೊಳೆ ಸಮುದ್ರ ಸೇರುವ ಉಪ್ಪುಂದ-ಕರ್ಕಿಕಳಿ ಬ್ರೇಕ್ ವಾಟರ್ ಸಮೀಪ ಪತ್ತೆಯಾಗಿದೆ.
ಯಡಿಯೂರಪ್ಪ ರಾಜೀನಾಮೆ; ಆತ್ಮಹತ್ಯೆಗೆ ಶರಣಾದ ಅಭಿಮಾನಿ

Related Articles

Back to top button