Advertisement -Home Add

ಅಪ್ರಾಪ್ತ ಬಾಲಕಿ ಮೇಲೆ ಸಹೋದರರಿಂದಲೇ ಅತ್ಯಾಚಾರ ಯತ್ನ

ವಿಡಿಯೋ ಚಿತ್ರಿಸಿ ವೈರಲ್ ಮಾಡುವುದಾಗಿ ಬೆದರಿಕೆ

ಪ್ರಗತಿವಾಹಿನಿ ಸುದ್ದಿ; ಲಕ್ನೋ: ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಸಹೋದರರು ಅತ್ಯಾಚಾರಕ್ಕೆ ಯತ್ನಿಸಿ, ಮೋಬೈಲ್ ನಲ್ಲಿ ವಿಡಿಯೋ ಚಿತ್ರಿಕರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

14 ವರ್ಷದ ಬಾಲಕಿ ಮನೆಗೆ ನುಗ್ಗಿದ ನಾಲ್ವವರು ಅಣ್ಣ-ತಮ್ಮಂದಿರಲ್ಲಿ ಓರ್ವ ಬಾಲಕಿ ಮೇಲೆ ಎಗರಿದ್ದಾನೆ. ಉಳಿದವರು ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಕುಟುಂಬದವರು ಪೊಲೀಸರಿಗೆ ಮಾಹಿತಿ ನಿಡಿದರೆ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354, 323, 405 ಹಾಗೂ 504 ಕ್ರಿಮಿನಲ್ ಬೆದರಿಕೆ ಹಾಗೂ ಪೊಕ್ಸೊ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.