*ಲಾಯರ್ ಗೆ ಡಿಕ್ಕಿಹೊಡೆದ ಕಾರು: ವಕೀಲರ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನ್ಯಾಯಾಲಯದ ಆವರಣದಿಂದಲ್ಲಿ ವಿಜಯಪುರ ಜಿಲ್ಲೆಯಲ್ಲಿ ವಕೀಲನಿಗೆ ಕಾರ್ ಡಿಕ್ಕಿಹೊಡೆದ ಘಟನೆಯನ್ನು ಖಂಡಿಸಿ ಬೆಳಗಾವಿ ವಕೀಲರ ಸಂಘ ಬೃಹತ್ ಪ್ರತಿಭಟನೆ ನಡೆಸಿತು.
ಬಳಿಕ ಪ್ರತಿಭಟನಾ ರ್ಯಾಲಿಯು ಡಿಸಿ ಕಚೇರಿ ತಲುಪಿ ಘೋಷಣೆ ಕೂಗಿದರು. ವಕೀಲರ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿ ತಡಮಾಡಿದ್ದಕ್ಕೆ ಗಲಾಟೆಯು ನಡೆಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮನವಿ ಸಲ್ಲಿಸಲಾಯಿತು ಬಳಿಕ ಮಾತನಾಡಿದ ವಕೀಲರು, ವಕೀಲರ ಮೇಲೆ ನೀರಂತರವಾಗಿ ಹಲ್ಲೆಗಳು ನಡೆಯುತ್ತಿದೆ, ತಿಂಗಳಿಗೆ ಒಂದಾದರು ಹಲ್ಲೆಗಳು ನಡೆಯುತ್ತಿದೆ. ಕೆಲ ದಿನಗಳ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ವಕೀಲ ಓರ್ವನಿಗೆ ಇನೋವಾ ಕಾರು ಡಿಕ್ಕಿ ಹೊಡೆದು ಎಳೆದುಕೊಂಡು ಹೋಗಿದೆ. ಪದೆ ಪದೆ ಈ ರೀತಿ ಘಟನೆಗಳು ನಡೆಯುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ವಕೀಲರೆ ಆಗಿರುವ ಮುಖ್ಯಂಮತ್ರಿ ಸಿದ್ದರಾಮಯ್ಯ ಅವರು ವಕೀಲರ ಮೇಲಿನ ಹಲ್ಲೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ