
ಪ್ರಗತಿವಾಹಿನಿ ಸುದ್ದಿ: ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡುತ್ತಿದ್ದಾಗಲೇ ವಕೀಲರೊಬ್ಬರು ಏಕಾಏಕಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣ ಹೈಕೋರ್ಟ್ ನಲ್ಲಿ ನಡೆದಿದೆ.
ವೇಣೂಗೋಪಾಲ್ ರಾವ್ ಮೃತ ಹಕೀಲರು. ಹೈಕೋರ್ಟ್ ನ 21ನೇ ಹಾಲ್ ನಲ್ಲಿ ವಾದ-ಪ್ರತಿವಾದ ಆಲಿಸುತ್ತಿದ್ದ ವೇಳೆ ಕುಸಿದು ಬಿದ್ದ ಅವರನ್ನು ತಕ್ಷಣ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಕೋರ್ಟ್ ಹಾಲ್ ನಲ್ಲೇ ವಕೀಲರ ಸಾವು ಎಲ್ಲರನ್ನು ಆಘಾತಕ್ಕೀಡುಮಾಡಿದೆ. ಘಟನೆಯಿಂದ ಕೋರ್ಟ್ ಕಲಾಪ ರದ್ದು ಮಾಡಿ, ತುರ್ತು ಅರ್ಜಿ ವಿಚಾರಣೆಯನ್ನು ಮಾತ್ರ ನಡೆಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ