ಪ್ರಗತಿವಾಹಿನಿ ಸುದ್ದಿ, ವಿಜಯಪುರ -ವಿಜಯಪುರ ವಕೀಲರ ಸಂಘದ ವತಿಯಿಂದ ಕೋರ್ಟ್ ಕಲಾಪ ಬಂದ್ ಮಾಡಿ ನ್ಯೂದೆಹಲಿ ಹಜಾರಿ ಕೋರ್ಟ್ ನಲ್ಲಿ ವಕೀಲರ ಮೇಲೆ ಪೋಲಿಸರು ಲಾಠಿ ಚಾರ್ಜ್ ಮತ್ತು ಗುಂಡು ಹಾರಿಸಿರುವುದನ್ನು ಖಂಡಿಸಿ, ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸದಾನಂದ ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷರಾದ ಎಂ.ಎಚ್.ಖಾಸನೀಸ್ ಮಾತನಾಡಿ, ನ್ಯೂದೆಹಲಿ ಹಜಾರಿ ಕೋರ್ಟದಲ್ಲಿ ಇರುವ ವಕೀಲರ ಮೇಲೆ ಪೋಲಿಸರು ಲಾಠಿ ಚಾರ್ಜ್ ಮಾಡಿದ್ದಾರೆ. ಮತ್ತು ಗುಂಡು ಹಾರಿಸಿ ಗಂಭೀರವಾಗಿ ವಕೀಲರಿಗೆ ಗಾಯ ಮಾಡಿದ್ದಾರೆ. ಈಗಾಗಲೇ ಹಲವು ವಕೀಲರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಲೆ ಇದೆ. ಕೂಡಲೆ ಎಚ್ಚೆತ್ತುಕೊಂಡು ವಕೀಲರ ರಕ್ಷಣೆಗೆ ಸರ್ಕಾರ ಮುಂದಾಗುವುದರ ಜೊತೆಗೆ ಪೊಲೀಸ್‌ರು ಸಹಕರಿಸಬೇಕು ಎಂದರು. ಇದೇ ರೀತಿ ಮುಂದೆ ನಡೆದರೆ ನಾವು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಜಯಪುರ ವಕೀಲರ ಸಂಘದ ವತಿಯಿಂದ ಕೋರ್ಟ್ ಕಲಾಪಗಳಿಂದ ದೂರು ಉಳಿದು ಜಿಲ್ಲಾಧಿಕಾರಿಗಳ ಮುಖಾಂತರ ಭಾರತ ಸರಕಾರಕ್ಕೆ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರವನ್ನು ಕಳಿಸಲಾಯಿತು.
ಉಪಾಧ್ಯಕ್ಷರಾದ ಆನಂದ ಎನ್. ರುಣವಾಲ್, ಕಾರ್ಯದರ್ಶಿ ಆರ್.ಎನ್.ಗುಡ್ಡೋಡಗಿ, ಜಂಟಿ ಕಾರ್ಯದರ್ಶಿ ಸಿ.ಎ. ಇಂಚಗೇರಿ, ಲ್ಯಾಬರಿ ಸೆಕ್ರೆಟರಿ, ಎಸ್.ಎ.ಚೂರಿ, ನ್ಯಾಯವಾದಿ ಸಂಘದ ಕಾರ್ಯಕಾರಿಣಿ ಸದಸ್ಯರಾದ ಬಿ.ಬಿ. ಹಿಪ್ಪರಗಿ, ಕೆ.ಸಿ.ರಾಠೋಡ, ಮೆಹಬೂಬ ಆರ್. ಹವಾಲ್ದಾರ, ವಿ.ಎಸ್.ಪಾಟೀಲ ನಾಗರಹಳ್ಳಿ, ಐ.ಬಿ. ಅಳ್ಳಿಗಿಡದ, ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ಗೀತಾ ಜಿ. ಕನಕರಡ್ಡಿ,ಡಿ.ಎಸ್.ಮುಲ್ಲಾ, ಸಿದ್ರಾಮಪ್ಪ ಮಠದ, ಎಸ್.ಆರ್.ಒಡೆಯರ್, ಎಸ್.ಬಿ.ನಂದುರ, ಎಮ್.ಕೆ.ಜತ್ತಕರ್, ಎಮ್.ಎಚ್.ಕೋಳಿ, ಎ.ಎಚ್.ಶೇಖ, ಜೆ.ಎಮ್.ಭೂಸಗೊಂಡ, ಎಸ್.ಎಸ್.ಬಿರಾದಾರ, ಬಿ.ಕೆ.ಖಾಸನೀಸ್, ಎಮ್.ಎಲ್.ಬನಸೋಡೆ, ಎಸ್.ಪಿ.ಮಾನೆ, ಎಸ್.ಆರ್.ನಾಟಿಕಾರ, ಎಸ್.ಎಸ್.ಹೊನಮನಿ, ವ್ಹಿ.ಬಿ.ಧನಶೆಟ್ಟಿ, ಎಮ್.ಕೆ.ಜಾಕರ್, ಎಸ್.ಸಿ.ಕುಮಟಗಿ ಹಾಗೂ ನ್ಯಾಯವಾದಿಗಳ ಸಂಘದ ಸದಸ್ಯರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ