Kannada NewsKarnataka NewsLatest

ಇಷ್ಟೊಂದು ದೊಡ್ಡ ಪ್ರಮಾಣದ ಅಭಿವೃದ್ಧಿಗೆ ಕ್ಷೇತ್ರದ ಜನರ ಅಕ್ಕರೆಯೇ ಕಾರಣ – ಲಕ್ಷ್ಮಿ ಹೆಬ್ಬಾಳಕರ್  

​50 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಪೂಜೆ, ಕೋಟಿ ರೂ ವೆಚ್ಚದ ಬ್ರಿಜ್ ಕಂ ಬಾಂದಾರ ಕಾಮಗಾರಿ ಪರಿಶೀಲನೆ​

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ –  ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನರು ಅತ್ಯಂತ ಕಷ್ಟ ಸಹಿಷ್ಣುಗಳಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ, ಸಹಕಾರ ನೀಡುತ್ತಾರೆ. ಇಂತಹ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ಖುಷಿ ಹಾಗೂ ಪುಣ್ಯದ ಕೆಲಸ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಕರ್ನಾಟಕದಿಂದ ಗೋವಾಕ್ಕೆ ತೆರಳುವ ರಾಜ್ಯ ಹೆದ್ದಾರಿಯಿಂದ ರಣಕುಂಡೆ ಗ್ರಾಮದವರೆಗಿನ ರಸ್ತೆಯ ಸುಧಾರಣೆ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಾನು ಶಾಸಕಿಯಾಗಿ ಆಯ್ಕೆಯಾದಾಗಿನಿಂದಲೂ ಕ್ಷೇತ್ರದ ಜನರು ನನ್ನನ್ನು ತಮ್ಮ ಮನೆಯ ಮಗಳೆನ್ನುವಂತೆ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ. ಸಲಹೆ, ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಇದರಿಂದಾಗಿಯೇ ನನಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕ್ಷೇತ್ರದ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
  ಸಮಾಜ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆಯ  50 ಲಕ್ಷ ರೂ,ಗಳ ಅನುದಾನದಲ್ಲಿ ರಸ್ತೆ‌ ನಿರ್ಮಾಣ ಕಾಮಗಾರಿ ನಡೆಯಲಿದೆ. ​ಇದೇ ವೇಳೆ ನರೇಗಾ ಯೋಜನೆಯಡಿ ಕೆಲಸ ಮಾಡುವ ​ಮಹಿಳೆಯರಿಗೆ ಫಸ್ಟ್ ಏಡ್ ಕಿಟ್ಸ್ ಹಾಗೂ ಕ್ಯಾಪ್ ಗಳನ್ನು​ ಸಹ​ ವಿತರಿಸಿದ​ರು​.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸ್ನೇಹಲ್ ಲೋಹಾರ, ಉಪಾಧ್ಯಕ್ಷರಾದ ಮಲ್ಲಪ್ಪ ಪಾಟೀಲ, ಭರಮಾ ಪಾಟೀಲ, ಸುಲೋಚನ ಕೋಲಕಾರ, ಗೌಸಬಿ ತಹಶಿಲ್ದಾರ, ಪರುಶರಾಮ ಶಹಾಪೂರಕರ್, ಅರ್ಚನಾ ಚಿಗರೆ, ವರ್ಷಾ ಡುಕರೆ, ವಸಂತ ಸಾಂಬ್ರೇಕರ್, ಮಾರುತಿ ಡುಕರೆ, ಪಿಡಿಓ ಪ್ರಕಾಶ ಕುಡಚಿ, ನಿಂಗಪ್ಪ ಪಾಟೀಲ, ರಾವಳು ಪಾಟೀಲ, ಜೆ ವೈ ಪಾಟೀಲ, ವಿಠ್ಠಲ ಪಾಟೀಲ, ಯಲ್ಲಪ್ಪ ಸಕ್ರೋಜಿ, ರಾಜು ಪಾಟೀಲ, ರಮೇಶ ಪಾಟೀಲ, ಪ್ರಭಾಕರ್ ಪಾಟೀಲ, ಅಪುನಿ ಪಾಟೀಲ, ರಂಜನಾ ಭಾಸ್ಕರ್, ವಿನಾಯಕ ಪಾಟೀಲ, ಸಂಜು ಹಣಬರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

​ಕಾಮಗಾರಿ ಪರಿಶೀಲನೆ​

​  ​ 
ಬೆಳಗುಂದಿ ಗ್ರಾಮದಲ್ಲಿ ​ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಒಟ್ಟು ಒಂದು ಕೋಟಿ ರೂ,ಗಳ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ (ಬಾಂದಾರ) ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ​ ಗ್ರಾಮದ ಹಿರಿಯರ ಹಾಗೂ ಗ್ರಾಮಸ್ಥರ ಜೊತೆ ತೆರಳಿ​ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರಗತಿ ಪರಿಶೀಲನೆಯನ್ನು ನಡೆಸಿದ​ರು.​
ಮಳೆಗಾಲದಲ್ಲಿ ನೀರು ಗ್ರಾಮದ ಸುತ್ತಮುತ್ತಲಿನ ಹೊಲಗದ್ದೆಗಳಿಗೆ​ ​ಹಾಯ್ದು​ ಸುಮಾರು 500 ಎಕರೆ​ ಬೆಳೆಗಳನ್ನು ನಾಶ​ವಾಗುತ್ತಿತ್ತು. ಇದರಿಂದ​ ರೈತರಿಗೆ ತೊಂದರೆಗಳಾಗುತ್ತಿರುವುದನ್ನು ಗಮನಿಸಿ ​ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊ​ಳ್ಳಲಾಗಿದೆ. ಈ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದಾಗಿ ಮಳೆಯ ನೀರು ಸರಾಗವಾಗಿ ಹರಿದು ಮಾರ್ಕಂಡೇಯ ನದಿಗೆ ಸೇರಲಿದ್ದು, ಮಳೆಗಾಲದಲ್ಲಿ ​ರೈತರಿಗಾಗುವ ತೊಂದರೆ ತಪ್ಪಲಿದೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯಲ್ಲಪ್ಪ ಡೇಕೋಳ್ಕರ್, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು, ಮಾಜಿ ಗ್ರಾಮ ಅಧ್ಯಕ್ಷ ಶಿವಾಜಿ ಬೊಕಡೆ, ಸೋಮನಗೌಡ, ಪ್ರಲ್ಹಾದ್ ಚಿರಮುರ್ಕರ್, ಪ್ರಸಾದ ಬೋಕಡೆ, ಗೀತಾ ಡೇಕೋಳ್ಕರ್, ರವಿ ಪಾಟೀಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button