ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರೇಬಾಗೇವಾಡಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅನಾಹುತದಿಂದ ನಾಲ್ಕು ಮನೆಗಳು ಸುಟ್ಟುಹೋಗಿದ್ದು, ಸಂತ್ರಸ್ತರ ಕಣ್ಣೀರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತುರ್ತಾಗಿ ಸ್ಪಂದಿಸಿದ್ದಾರೆ.
ಬೆಂಕಿ ಆಕಸ್ಮಿಕದಿಂದಾಗಿ ಕುಟುಂಬಗಳು ತಮ್ಮ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಧವಸ ಧಾನ್ಯ, ಕಾಗದಪತ್ರ ಸೇರಿದಂತೆ ಎಲ್ಲವೂ ಬೆಂಕಿಗೆ ಆಪೋಶನವಾಗಿದೆ. ಸಂತ್ರಸ್ತರ ಸಂಕಷ್ಟ ಕಂಡ ಲಕ್ಷ್ಮಿ ಹೆಬ್ಬಾಳಕರ್ ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಸ್ಥಳಕ್ಕೆ ಧಾವಿಸಿದರು. ಅವರನ್ನೆಲ್ಲ ಸಂತೈಸಿದ ಶಾಸಕರು, ತಮ್ಮಿಂದಾದ ರೀತಿಯಲ್ಲಿ ಆರ್ಥಿಕ ಸಹಾಯವನ್ನೂ ನೀಡಿದರು.
ಅವರ ಪರಿಸ್ಥಿತಿ ಕಂಡು ತೀವ್ರ ನೋವಾಗಿದೆ. ಸರ್ಕಾರದಿಂದ ಶೀಘ್ರವಾಗಿ ಎಲ್ಲ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಡಲು ಬದ್ದನಾಗಿದ್ದೇನೆ. ಈ ಬಗ್ಗೆ ಈಗಾಗಲೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಸಿ ಸಿ ಪಾಟೀಲ, ತಹಶಿಲ್ದಾರ, ಉಪ ತಹಶಿಲ್ದಾರರು, ರೆವಿನ್ಯೂ ಇನಸ್ಪೆಕ್ಟರ್, ಪಿಡಿಓ ಸೇರಿದಂತೆ ವಿವಿಧ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಸುರೇಶ ಇಟಗಿ, ಗೌಸ್ ಜಾಲಿಕೊಪ್ಪ, ಬಿ ಎನ್ ಪಾಟೀಲ, ಸದ್ದಾಮ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ