Kannada NewsKarnataka NewsLatest

ಎತ್ತಿನಗಾಡಿಯ ಭವ್ಯ  ಜಂಗೀ ಶರ್ಯತ್ ಉದ್ಘಾಟಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್​

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ –  ಬೆಳಗುಂದಿ ಗ್ರಾಮದಲ್ಲಿ ಶ್ರೀ ಬ್ರಹ್ಮಲಿಂಗ ಯುವಕ ಮಂಡಳದ ವತಿಯಿಂದ ಏರ್ಪಡಿಸಲಾಗಿದ್ದ ಎತ್ತಿನಗಾಡಿಯ ಭವ್ಯ  ಜಂಗೀ ಶರ್ಯತ್ ಕಾರ್ಯಕ್ರಮವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಬ್ಬಾಳಕರ್, ಗ್ರಾಮೀಣ ಜನರು ಜನಪದ ಕ್ರೀಡೆ, ಸಂಸ್ಕೃತಿಗಳನ್ನು ಉಳಿಸಿ, ಮುನ್ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
​ ಎತ್ತಿನಗಾಡಿ ಶರ್ಯತ್ತು ​ಅತ್ಯಂತ ಪ್ರಾಚೀನ ಕ್ರೀಡೆಗಳಲ್ಲೊಂದು. ವರ್ಷವಿಡೀ ಶ್ರಮದಲ್ಲೇ ಕಳೆಯುವ ಗ್ರಾಮೀಣ ಜನರು ​ಇಂತಹ ಕ್ರೀಡೆಗಳಿಂದ ಮನರಂಜನೆ, ಮಾನಸಿಕ ನೆಮ್ಮದಿ ಕಂಡುಕೊಳ್ಳುತ್ತಾರೆ. ಆದರೆ​ ಎಲ್ಲ ಮುನ್ನೆಚ್ಚರಿಕೆಯೊಂದಿಗೆ ಇದನ್ನು ನಡೆಸಬೇಕು​ ಎಂದು ಹೆಬ್ಬಾಳಕರ್ ಕರೆ ನೀಡಿದರು.​
 
ಈ ಸಂದರ್ಭದಲ್ಲಿ ಗ್ರಾಮದ​ ಹಿರಿಯರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು, ಯುವರಾಜ ಕದಂ, ಭದ್ರಾವತಿಯ​ ಮುಖಂಡರಾದ​ ಬಿ​. ಕೆ. ಶಿವಕುಮಾರ, ಯಲ್ಲಪ್ಪ ದೇಕೋಳಕರ್, ಬಾಳು ದೇಸೂರಕರ್, ಮೃಣಾಲ್ ಹೆಬ್ಬಾಳಕರ್, ಲಕ್ಷ್ಮಣ ಪಾಟೀಲ, ಪುಂಡಲೀಕ ಜಾಧವ್, ದತ್ತಾ ಪಾಟೀಲ, ಅರವಿಂದ ಪಾಟೀಲ, ಜಯವಂತ ಬಾಳೇಕುಂದ್ರಿ, ಶಿವಾಜಿ ಮಂಡೋಳಕರ್, ಬ್ರಹಲಿಂಗ ಯುವಕ ಮಂಡಳದ ಪದಾಧಿಕಾರಿಗಳು, ಗ್ರಾಮದ ಜನ​ರು​ ಉಪಸ್ಥಿತರಿದ್ದರು.
​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button