Kannada NewsKarnataka News

ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರದ ಹಳ್ಳಿ ಹಳ್ಳಿ ಓಡಾಡಿ ಗ್ರಾಮಸ್ಥ ಆರೋಗ್ಯ ವಿಚಾರಿಸುವ ಜೊತೆಗೆ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಿದ್ದಾರೆ. ಗುರುವಾರ ಸಹ ಹಲವಾರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.

ಕ್ಷೇತ್ರದ ರಂಗದೋಳಿ ಹಾಗೂ ಕಲ್ಯಾನಟ್ಟಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಅಧಿಕೃತವಾಗಿ ಚಾಲನೆಯನ್ನು ನೀಡಿದರು. ಗ್ರಾಮದ ಹಲವಾರು ಅಭಿವೃದ್ಧಿ ಕೆಲಸಗಳ ಬಗ್ಗೆ ಗ್ರಾಮದ ಹಿರಿಯರು ಹಾಗೂ ಯುವಕರೊಂದಿಗೆ ಚರ್ಚಿಸಿದ ಶಾಸಕಿ, ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಗುರಿಯಾಗಿದೆ ಎಂದು ತಿಳಿಸಿದರು.

ಆದಷ್ಟು ಬೇಗ ಮಾದರಿ ಕ್ಷೇತ್ರವನ್ನಾಗಿಸುವ ಪಣ ತೊಟ್ಟಿದ್ದು,  ನಿಮ್ಮ ಬೇಡಿಕೆಯಂತೆ ಅಭಿವೃದ್ಧಿಪಡಿಸುತ್ತೇನೆ. ಇದಕ್ಕೆಲ್ಲಾ ನಿಮ್ಮ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಎಂದು ವಿನಂತಿಸಿದರು.

 ಅಕ್ರಮ ಆಸ್ತಿ ಮಾಡಿಲ್ಲ

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ನಾನು ಯಾವುದೇ ರೀತಿಯ ಅಕ್ರಮ ಆಸ್ತಿ ಮಾಡಿಲ್ಲ. ನಾನು ಮಗಳಾಗಿ, ತಂಗಿಯಾಗಿ, ಅಮ್ಮನಾಗಿ, ಸಮಾಜದ ಪ್ರತಿನಿಧಿಯಾಗಿ ನಿಂತಿದ್ದೇನೆ.  2.80 ಲಕ್ಷ ಮತದಾರರು ನನ್ನೊಂದಿಗಿದ್ದಾರೆ. ನನ್ನ ಮೇಲೆ ಈಗ ಬಂದಿರುವುದೆಲ್ಲ ಆರೋಪಗಳಷ್ಟೆ. ಅವು ಸತ್ಯವಾದವುಗಳಲ್ಲ.ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನು ಯಾವುದೇ ರೀತಿಯ ಅಕ್ರಮ ಮಾಡಿಲ್ಲ. ಅದು ಮುಂದಿನ ದಿನಗಳಲ್ಲಿ ಸಾಬೀತಾಗುತ್ತದೆ ಎಂದು ಹೇಳಿದರು.

Related Articles

Back to top button