Latest

ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೋವಿಡ್ ಮೂರನೇ ಅಲೆ ನಡುವೆಯೇ ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದ್ದು, ಫೆಬ್ರವರಿ 21ರಿಂದ ಪರೀಕ್ಷೆ ಆರಂಭವಾಗಲಿದೆ.

ಫೆಬ್ರವರಿ 21ರಿಂದ ಫೆಬ್ರವರಿ 26ರವರೆಗೆ ಪರೀಕ್ಷೆ ನಡೆಯಲಿದ್ದು, ಪ್ರಥಮ ಭಾಷೆಗೆ 100 ಅಂಕ ಹಾಗೂ ಉಳಿದ ವಿಷಯಗಳಿಗೆ 80 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಶಾಲಾ ಮಟ್ಟದಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧತೆಗೆ ಸೂಚಿಸಲಾಗಿದೆ.

Home add -Advt

ಫೆಬ್ರವರಿ 21ರಂದು ಪ್ರಥಮ ಭಾಷೆ ಪರೀಕ್ಷೆ, ಫೆಬ್ರವರಿ 22 ರಂದು ಸಮಾಜ ವಿಜ್ಞಾನ, ಫೆಬ್ರವರಿ.23ರಂದು ದ್ವಿತೀಯ ಭಾಷೆ, ಫೆಬ್ರವರಿ.24ರಂದು ಗಣಿತ, ಫೆಬ್ರವರಿ.25ರಂದು ತೃತೀಯ ಭಾಷೆ ಹಾಗೂ ಫೆಬ್ರವರಿ.26ರಂದು ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
ನಲಪಾಡ್ ವಿರುದ್ದ ಹಲ್ಲೆ ಆರೋಪ; ಯೂಟರ್ನ್ ಹೊಡೆದ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ

Related Articles

Back to top button