ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿ, ಮೈಸೂರು ಬಳಿಕ ಈಗ ರಾಜ್ಯ ರಾಜಧಾನಿ ಬೆಂಗಳೂರಿಗೆ 4 ಚಿರತೆಗಳು ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ. ಬೆಂಗಳೂರಿನ ಮುಖ್ಯರಸ್ತೆಯೊಂದರಲ್ಲಿ ಚಿರತೆ ಜಿಂಕೆಯನ್ನು ಹಿಡಿದು ತಿಂದಿದ್ದು, ಸುತ್ತಮುತ್ತಲಿನ ನಿವಾಸಿಗಳು ಜೀವಭಯದಲ್ಲಿ ಬದುಕುವಂತಾಗಿದೆ.
ತುರಹಳ್ಳಿ ಅರಣ್ಯ ಪ್ರದೇಶದಿಂದ ನಾಲ್ಕು ಚಿರತೆಗಳು ನಗರಕ್ಕೆ ಬಂದಿವೆ ಎಂದು ಹ್ಳಲಾಗುತ್ತಿದೆ. ಉತ್ತರಹಳ್ಳಿ ಮುಖ್ಯರಸ್ತೆಯ ಕೋಡಿಪಾಳ್ಯದಲ್ಲಿ ಚಿರತೆಯೊಂದು ಜಿಂಕೆ ಬೇಟೆಯಾಡಿದೆ. ಅದು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಹಿಂಬದಿ ಗೇಟ್ ಬಳಿ ಚಿರತೆ ಜಿಂಕೆಯನ್ನು ತಿಂದು ಹೋಗಿರುವುದು ಪತ್ತೆಯಾಗಿದೆ.
ಕೆಲ ದಿನಗಳಿಂದ ಕೋಡಿಪಾಳ್ಯ, ಕೆಂಗೇರಿ ಸುತ್ತಮುತ್ತದ ಪ್ರದೆಶದಲ್ಲಿ ನಾಲ್ಕು ಚಿರತೆಗಳು ಓಡಾಡುತ್ತಿವೆ ಎಂದು ಅಲ್ಲಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ರಸ್ತೆಯಲ್ಲಿ 5 ಶಾಲೆಗಳಿದ್ದು, ಶಾಲೆಗಳಿಗೆ ಮಕಕ್ಕಳನ್ನು ಕಳಿಸಲು ಪೋಷಕರು ಭಯಪಡುತ್ತಿದ್ದಾರೆ. ಅರಣ್ಯ ಸಿಬ್ಬಂದಿಗಳು ಬೋನ್ ಗಳನ್ನು ಇಟ್ಟು ಚಿರತೆ ಸೆರೆಗೆ ಯತ್ನಿಸಿದ್ದಾರೆ.
ಇದೇ ವೇಳೆ ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯೂ ಚಿರತೆಗಳು ಪ್ರತ್ಯಕ್ಷವಾಗಿವೆ ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ವಾಯುಸೇನೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಷ
https://pragati.taskdun.com/iaf-helicopteremergency-landingpunenear-baramati/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ