Latest

ಆಟಿಕೆ ಪಿಸ್ತೂಲ್ ಬಳಸಿ ಬ್ಯಾಂಕ್ ದರೋಡೆ; ಮಹಿಳೆ ಬಂಧನ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಆಟಿಕೆ ಪಿಸ್ತೂಲ್ ಬಳಸಿ ಬ್ಯಾಂಕ್ ನಿಂದ ಹಣ ದರೋಡೆ ಮಾಡಿದ ಮಹಿಳೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ಲೆಬನಾನ್ ನ ಸಲಿ ಹಫೀಸ್ ಎಂಬ ಮಹಿಳೆ ಈ ಪ್ರಕರಣದ ಆರೋಪಿ. ಈಕೆ ತನ್ನ ಸಹೋದರಿಯ ಕ್ಯಾನ್ಸರ್ ಚಿಕಿತ್ಸೆಗೆಂದು ಬ್ಯಾಂಕ್ ನಿಂದ ತನ್ನ ಉಳಿತಾಯದ ಖಾತೆಯ ಹಣ ಪಡೆಯಲು ಹಲವು ಬಾರಿ ಎಡತಾಕಿದ್ದಳು. ಆದರೆ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಲೆಬನಾನ್ ನಲ್ಲಿ ಈಕೆಗೆ ಕೇಳಿದಷ್ಟು ಹಣ ಸಿಕ್ಕಿರಲಿಲ್ಲ. ಬದಲಾಗಿ ಆಕೆ ತಿಂಗಳಿಗೆ 200 ಪೌಂಡ್ ಹಣ ಮಾತ್ರ ಪಡೆಯಬಹುದು ಎಂದು ಬ್ಯಾಂಕ್ ನವರು ಹೇಳಿದ್ದರು.

Home add -Advt

ಇದರಿಂದ ದಿಕ್ಕು ತೋಚದ ಮಹಿಳೆ ಬೈರೂತ್ ಬ್ಯಾಂಕ್ ಶಾಖೆಗೆ ನುಗ್ಗಿ 13 ಸಾವಿರ ಪೌಂಡ್ ಹಣ ಬಲವಂತವಾಗಿ ಪಡೆಯುತ್ತಿದ್ದ ವೇಳೆ ಆಕೆಯನ್ನು ಬಂಧಿಸಲಾಗಿದೆ. ಈ ಕುರಿತ ವಿಡಿಯೊ ಕ್ಲಿಪ್ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪದೇಪದೇ ಬ್ಯಾಂಕ್ ಶಾಖೆಗೆ ಹೋಗಿ ಹಣ ಕೇಳಿದಾಗ ನಿರಾಕರಿಸಲಾಯಿತು. ಚಿಕಿತ್ಸೆಗಾಗಿ ಹಣ ಬೇಕೆಂದು ಹೇಳಿಕೊಂಡಿದ್ದರೂ ಕೇಳದ ಕಾರಣ ತನ್ನ ಸಹೋದರಿಯ ಮಗನ ಆಟಿಕೆ ಪಿಸ್ತೂಲ್ ಬಳಸಿ ಹಣ ಪಡೆಯುವ ಪ್ರಯತ್ನ ಮಾಡಬೇಕಾಯಿತು ಎಂದು ಆರೋಪಿ ಮಹಿಳೆ ಹೇಳಿಕೊಂಡಿದ್ದಾಳೆ.

ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಕುಖ್ಯಾತ ಗ್ಯಾಂಗ್ ಸ್ಟರ್

Related Articles

Back to top button