EducationKannada NewsKarnataka News

ಲೀಲಾವತಿ ಹಿರೇಮಠ ಈಗ ಡಿಡಿಪಿಐ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬೆಳಗಾವಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ನಿಯುಕ್ತಿ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬೆಳಗಾವಿ ಉಪನಿರ್ದೇಶಕರಾಗಿ ಲೀಲಾವತಿ ಶಿವಯ್ಯ ಹಿರೇಮಠ ನೇಮಕವಾಗಿದ್ದಾರೆ. ಅವರು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ಹಿಸುತ್ತಿದ್ದರು. ಡಿಡಿಪಿಐ ಹುದ್ದೆ ಕಳೆದ ಹಲವು ತಿಂಗಳಿನಿಂದ ಖಾಲಿ ಇತ್ತು.

ಬೆಂಗಳೂರು ಆಯುಕ್ತರ ಕಚೇರಿಯ ಉಪನಿರ್ದೇಶಕರಾಗಿ ವೈ.ಸಿ.ರವಿಕುಮಾರ, ರಾಯಚೂರು ಡಯೆಟ್ ಪ್ರಾಚಾರ್ಯರಾಗಿ ಇಂದಿರಾ ಗಂಗಣ್ಣ, ಚಿಕ್ಕಮಗಳೂರು ಡಯೆಟ್ ಪ್ರಾಚಾರ್ಯರಾಗಿ ಕೆ.ಎಂ.ಸುನೀತ, ಮೈಸೂರು ತರಬೇತಿ ಸಂಸ್ಥೆಯ ಪ್ರವಾಚಕರಾಗಿ ಟಿ.ಎನ್.ಗಾಯತ್ರಿ, ಬೆಂಗಳೂರು ಆಯುಕ್ತರಕಟೇರಿ ಉಪನಿರ್ದೇಶಕರಾಗಿ ಎಂ.ಡಿ.ಉಷಾ, ಬೆಂಗಳೂರು ವಸತಿ ಶಿಕ್ಷಣ ಸಂಸ್ಥೆ ಉಪನಿರ್ದೇಶಕರಾಗಿ ಎನ್.ಲಕ್ಷ್ಮೀ ಪತಿ, ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಉಪನಿರ್ದೇಶಕರಾಗಿ ಗಣಪತಿ ಭಟ್ ನೇಮಕವಾಗಿದ್ದಾರೆ.

Home add -Advt

Related Articles

Back to top button