ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಬೆಳಗಾವಿಯ ಶ್ರೀನಗರ ಗಾರ್ಡನ್ ಉದ್ಯಾನವನದಲ್ಲಿ ಹಾಗೂ ಹನುಮಾನ್ ನಗರದ ಟಿ.ವಿ. ಸೆಂಟರ್‌ನ ಉದ್ಯಾನವನದಲ್ಲಿ ಮಹಾನಗರ ಪಾಲಿಕೆಯ ಅನುದಾನದಡಿಯಲ್ಲಿ ನಿರ್ಮಿಸಲಾದ ಕಾರಂಜಿ (ಪೌಂಟೇನ್) ಉದ್ಘಾಟನೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿಯು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃಧ್ದಿ ಪತದಲ್ಲಿದ್ದು, ರಸ್ತೆಗಳು ಸ್ಮಾರ್ಟ ಅಗುವುದರೊಂದಿಗೆ ಉದ್ಯಾನವನಗಳಲ್ಲಿ ಪೌಂಟೇನಗಳು ಸಹಿತ ಸ್ಮಾರ್ಟ ಆಗುತ್ತಿದೆ, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಮಹಾನಗರ ಪಾಲಿಕೆಯಡಿ ಶ್ರೀನಗರ ಹಾಗೂ ಹನುಮಾನ ನಗರ ಉದ್ಯಾನವನಗಳಲ್ಲಿ ಕಾರಂಜಿಗಳನ್ನು ಉದ್ಘಾಟನೆಗೊಳಿಸಲಾಗಿದೆ. ಆದ್ದರಿಂದ ಇಲ್ಲಿನ ರಹವಾಸಿಗಳು ಹಾಗೂ ಸಾರ್ವಜನಿಕರು ಉದ್ಯಾನವನಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದರು ಹಾಗೂ ಉದ್ಯಾನವನಗಳ ಇತರೆ ಕುಂದು ಕೊರತೆಗಳು ಕಂಡು ಬಂದಲ್ಲಿ ಅಧಿಕಾರಿಗಳಿಗೆ ಹಾಗೂ ನನ್ನ ಗಮನಕ್ಕೆ ತರಬೇಕೆಂದ ಅವರು ಮತಕ್ಷೇತ್ರದ ಎಲ್ಲ ಉದ್ಯಾನವನಗಳನ್ನು ಅಭಿವೃಧ್ದಿಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಕಾರ್ಪೋರೇಟರ್ ಅನುಶ್ರೀ ದೇಶಪಾಂಡೆ, ಮಹಾನಗರ ಪಾಲಿಕೆ ಅಧಿಕಾರಿಗಳು, ಹಿರಿಯ ನಾಗರಿಕ ಸಮಾವೇಶ ಸಂಘದ ಸದಸ್ಯರು, ಪಿ.ಎ.ಮೇಘನ್ನವರ, ರಾಮಚಂದ್ರ ನೇರ್ಲಿ, ಈರಯ್ಯ ಮಠಪತಿ, ಆರ್.ಆಯ್. ಹೊಂಗಲ, ಕೆ.ಎ. ನೇಗಿನಹಾಳ, ಶಂಕರ ಕರಿಲಿಂಗನ್ನವರ, ಅಶೋಕ ತೋರಾಟ, ಎ.ಎಮ್. ಪಾಟೀಲ, ಅಶೋಕ ದೇಶಪಾಂಡೆ, ರವಿ ಪಾಟೀಲ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ