ನೆರೆ ಸಂತ್ರಸ್ಥರಿಗೆ ಮೂಲಭೂತ ಸಾಮಗ್ರಿಗಳನ್ನು ವಿತರಿಸಿದ ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶಾಸಕ ಅನಿಲ ಬೆನಕರವರು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಅತಿವೃಷ್ಠಿಯಿಂದ ಬಳಲಿದ ನೆರೆ ಸಂತ್ರಸ್ಥರಿಗೆ ಅಕ್ಕಿ, ಗೋದಿ ಹಿಟ್ಟು, ಬಟ್ಟೆ, ಬ್ಲಾಂಕೇಟ್ಸ್ ಹಾಗೂ ಇನ್ನಿತರೆ ಇತರ ಅಗತ್ಯ ದಿನ ಬಳಕೆ ವಸ್ತುಗಳನ್ನು ಬಿ.ಜೆ.ಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ತಾಜ್ ಶೇಖ ಅವರ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನೆರೆ ಸಂತ್ರಸ್ಥರಿಗೆ ನೆರವು ನೀಡುವ ಉದ್ದೇಶದಿಂದ ಸಂಸದರರಾದ ಶ್ರೀಮತಿ. ಶೋಭಾ ಕರಂದ್ಲಾಜೆ ರವರು ನೆರೆ ಸಂತ್ರಸ್ಥರನ್ನು ಬೇಟಿ ಮಾಡಿದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ನೆರವನ್ನು ನೀಡುವುದಾಗಿ ತಿಳಿಸಿದ್ದರ ಪ್ರಯುಕ್ತ ಹಾಗೂ ತುಮಕೂರು ಜಿಲ್ಲೆಯ ದಂಡಿನಶಿವರ ಮತ್ತು ಅಮಸಂದ್ರ ಗ್ರಾಮದ ವಿನಾಯಕ ಗೆಳೆಯರ ಬಳಗದಿಂದ ನೆರೆ ಸಂತ್ರಸ್ಥರ ಕುಟುಂಬಗಳಿಗೆ ಅಗತ್ಯ ವಸ್ತುಗಳಾದ ಅಕ್ಕಿ, ಗೋದಿ ಹಿಟ್ಟು, ಬಟ್ಟೆ, ಬ್ಲಾಂಕೇಟ್ಸ್, ಕೊಬ್ಬರಿ ಎಣ್ಣೆ, ಶ್ಯಾಂಪು, ಸೀರೆಗಳು ಹಾಗೂ ಇನ್ನಿತರೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ನೆರೆ ಸಂತ್ರಸ್ಥರಿಗೆ ವಿತರಣೆ ಮಾಡಲು ತಿಳಿಸಿದ್ದರ ಪ್ರಯುಕ್ತ ಇಂದು 250 ಕ್ಕೂ ಹೆಚ್ಚು ಕುಟುಂಬಕ್ಕೆ ವಿತರಣೆ ಮಾಡಲಾಗಿದೆ.
ನೆರೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಕಟ್ಟಿಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ, ಸರ್ಕಾರದಿಂದ ಬರುವ ಎಲ್ಲ ಸಹಾಯವನ್ನು ಮಾಡಲಾಗುವುದು ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆಗಳನ್ನು ಕಟ್ಟಿಸಿ ಕೊಡಲು ಸಹಕರಿಸಲಾಗುವುದು ಮತ್ತು ಎಲ್ಲ ಆಯಾಮಗಳಿಂದಲೂ ನಿಮಗೆ ಸಹಕಾರವನ್ನು ನೀಡುತ್ತೇನೆಂದ ಅವರು ಸಂಬಂಧಿಸಿದ ಎಲ್ಲ ಅಧಿಕಾರಿಗಳ ಜೊತೆಗೆ ಬಂದು ನಿಮ್ಮ ಮನೆಯ ಸ್ಥಿತಿಗತಿಗಳನ್ನು ಅರಿತು ಅಗತ್ಯ ಕ್ರಮವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನೂರಾರು ನೆರೆ ಸಂತ್ರಸ್ಥರ ಕುಟುಂಬಗಳು, ಬಿ.ಜೆ.ಪಿಯ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ