Kannada NewsKarnataka NewsLatest

ಬೆಳಗಾವಿಯಿಂದ ಚಿರತೆ ಪರಾರಿ: ಅಧಿಕೃತ ನಿರ್ಧಾರಕ್ಕೆ ಬಂದ ಅರಣ್ಯ ಇಲಾಖೆ ; ಶಾಲೆಗಳು ಪುನಾರಂಭ?

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಕಳೆದ ಒಂದು ತಿಂಗಳಿನಿಂದ ಬೆಳಗಾವಿ ಜನರ ನಿದ್ದೆಗಿಡಿಸಿರುವ ಚಿರತೆ ಬೆಳಗಾವಿಯಿಂದ ಪರಾರಿಯಾಗಿದೆ ಎನ್ನುವ ಅಧಿಕೃತ ನಿರ್ಧಾರಕ್ಕೆ ಅರಣ್ಯ ಇಲಾಖೆ ಬಂದಿದೆ.

ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಈ ವಿಷಯ ತಿಳಿಸಿದ್ದು, ಈವರೆಗೆ ನಡೆಯುತ್ತಿದ್ದ ಕಾರ್ಯಾಚರಣೆಗೆ ವಿರಾಮ ಬೀಳಲಿದೆ.

ಕಳೆದ 10 ದಿನಗಳಿಂದ ತನ್ನ ಇರುವಿನ ಕುರಿತು ಯಾವ ಸುಳಿವನ್ನೂ ನೀಡದ ಹಿನ್ನೆಲೆಯಲ್ಲಿ ಭಾನುವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು. ಆ ವೇಳೆ ಕೂಡ ಚಿರತೆ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಚಿರತೆ ಇಲ್ಲಿಂದ ಪರಾರಿಯಾಗಿದೆ ಎನ್ನುವ ನಿರ್ಧಾರಕ್ಕೆ ಬರಲಾಯಿತು.

ಕೆಲವು ದಿನಗಳ ಹಿಂದೆ ಮಂಡೋಳಿ ಬಳಿ ಚಿರತೆ ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಬಂದಿತ್ತು. ಹಾಗಾಗಿ ಚಿರತೆ ಮಂಡೋಳಿ ಪ್ರದೇಶದ ಮೂಲಕ ಪರಾರಿಯಾಗಿರಬಹುದು ಎಂದು ಯೋಚಿಸಲಾಗಿದೆ.

ಅರಣ್ಯ ಇಲಾಖೆ ಇಂತಹ ನಿರ್ಧಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಾಚರಣೆಗಳೂ ಸ್ಥಗಿತವಾಗಲಿವೆ. ಸಕ್ರೆಬೈಲಿನಿಂದ ಕರೆಸಲಾಗಿರುವ ಆನೆಗಳನ್ನು ಸಧ್ಯದಲ್ಲೇ ವಾಪಸ್ ಕಳಿಸಲು ನಿರ್ಧರಿಸಲಾಗಿದೆೆ.

ಆದರೆ ಕ್ಯಾಮರಾಗಳನ್ನು ಇನ್ನಷ್ಟು ದಿನ ಹಾಗೆಯೇ ಇಟ್ಟು ಅದರ ಮೂಲಕ ಪರಿಶೀಲನೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ.

ಶಾಲೆಗಳು ಆರಂಭ?

ಚಿರತೆ ಪರಾರಿಯಾಗಿದೆ ಎನ್ನುವ ನಿರ್ಧಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಎಲ್ಲ ಶಾಲೆಗಳನ್ನು ಎಂದಿನಂತೆ ಆರಂಭಿಸಲು ಶಿಕ್ಷಣ ಇಲಾಖೆ ಯೋಚಿಸಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ಡಿಡಿಪಿಐ ಬಸವರಾಜ ನಾಲತವಾಡ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಇನ್ನು ಕೆಲವೇ ಹೊತ್ತಿನಲ್ಲಿ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ.

ಕಳೆದ ಸುಮಾರು ಒಂದು ತಿಂಗಳಿನಿಂದ ಸುತ್ತಲಿನ 22 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಬೆಳಗ್ಗೆ ನಡೆದ ಕೂಂಬಿಂಗ್

ಭಾನುವಾರ   ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ಚಿರತೆ ಪತ್ತೆಗೆ ಬೃಹತ್ ಕಾರ್ಯಾಚರಣೆ ನಡೆಸಿದ್ದರು. 150 ಅರಣ್ಯ ಸಿಬ್ಬಂದಿ ಹಾಗೂ 100 ಪೊಲೀಸ್ ಸಿಬ್ಬಂದಿ ಸೇರಿ ಒಟ್ಟೂ 250 ಜನರು ಕಾರ್ಯಾಚರಣೆ ನಡೆಸಿದರು.

2 ಆನೆಗಳೊಂದಿಗೆ ಪಟಾಕಿಗಳನ್ನು ಸಿಡಿಸುತ್ತ ಕಾರ್ಯಾಚರಣೆ ನಡೆಸಲಾಯಿತು. ಇಡೀ ಗಾಲ್ಫ್ ಮೈದಾನವನ್ನು ಶೋಧಿಸಲಾಯಿತು. ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತಾದರೂ ಚಿರತೆಯ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.

ಚಿರತೆ ಗಾಲ್ಫ್ ಮೈದಾನ ಬಿಟ್ಟು ಹೊರಗೆ ಹೋಗಿರಬಹುದು ಎನ್ನುವ ಸಂಶಯ ಕಳೆದ 10 ದಿನಗಳಿಂದ ವ್ಯಕ್ತವಾಗುತ್ತಿದೆ. ಯಾವುದೇ ಕ್ಯಾಮರಾದಲ್ಲಿ ಸಹ ಕಾಣಿಸಲಿಲ್ಲ. ಅಷ್ಟು ದಿನಗಳವರೆಗೆ ಅವಿತರಲು ಸಾಧ್ಯವಿಲ್ಲ. ಹಾಗಾಗಿ ಅದು ಬೇರೆಡೆಗೆ ಓಡಿಹೋಗಿರಬಹುದು ಎನ್ನುವ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು.

 

https://pragati.taskdun.com/latest/forest-and-police-personnel-conducted-a-massive-combing-operation-in-the-wee-hours-of-sunday/

 

https://pragati.taskdun.com/local/leopard-appear-road-belagavicity-anxious-trap-mobile-camera/

 

https://pragati.taskdun.com/karnataka-news/education-karnataka-news/belgaum-education-department-has-issued-an-important-notice-to-22-schools/

 

 

 

https://pragati.taskdun.com/latest/cheetah-just-missed-again/

https://pragati.taskdun.com/latest/cheetah-operation-failed-on-friday-too/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button