
ಪ್ರಗತಿವಾಹಿನಿ ಸುದ್ದಿ; ಇಡುಕ್ಕಿ; ಚಿರತೆಯನ್ನು ಹತ್ಯೆ ಮಾಡಿ ಅದರ ಮಾಂಸವನ್ನು ತಿಂದು ತೇಗಿದ ಐವರು ಆರೋಪಿಗಳನ್ನು ಕೇರಳದ ಇಡುಕ್ಕಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರು ಈ ಹಿಂದೆ ಕೂಡ ಇಂಥದ್ದೇ ಕೃತ್ಯವೆಸಗಿದ್ದರು. ಚಿರತೆಯನ್ನು ಸಾಮಾನ್ಯವಾಗಿ ಅದರ ಉಗುರು ಹಾಗೂ ಚರ್ಮಕ್ಕಾಗಿ ಬೇಟೆ ಆಡುವುದು ಸಹಜ. ಆದರೆ ಅದರ ಮಾಂಸವನ್ನೂ ತಿಂದಿದ್ದಾರೆ ಈ ಐವರು ಆರೋಪಿಗಳು.
ಆರೋಪಿಗಳ ವಿರುದ್ಧ ವನ್ಯಜೀವಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಬಂಧಿತರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.