*ಬಾಂಗ್ಲಾದೇಶದ ಹಿಂದುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಲಿ: ಕೃಷ್ಣ ಭಟ್*
ಪ್ರಗತಿವಾಹಿನಿ ಸುದ್ದಿ: ಬಾಂಗ್ಲಾದೇಶದಲ್ಲಿ ಇರುವ ಅಲ್ಪಸಂಖ್ಯಾತ ಹಿಂದುಗಳ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಬೇಕು ಎಂದು ವಿಶ್ವ ಹಿಂದು ಪರಿಷತ್ತಿನ ಉತ್ತರ ಪ್ರಾಂತ್ಯದ ಕೋಶಾದ್ಯಕ್ಷ ಕೃಷ್ಣ ಭಟ್ ಅವರು ಒತ್ತಾಯಿಸಿದರು.
ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಂಗ್ಲಾದಲ್ಲಿ ನಡೆದ ಹಿಂಸಾಚಾರದಲ್ಲಿ ಹಿಂದು ಮನೆಗಳ ಲೂಟಿ, ಹಿಂದು ದೇವಸ್ಥಾನ ಇಸ್ಕಾನ್ ಧ್ವಂಸ ಮಾಡಿದ್ದು, ಭಾರತಕ್ಕೆ ಆತಂಕ ಮೂಡಿಸುವಂತದ್ದು, ಹಾಗಾಗಿ ತಕ್ಷಣ ನಮ್ಮ ಸರ್ಕಾರ ಎಚ್ಚೆತ್ತು ಅಲ್ಲಿನ ಅಲ್ಪ ಸಂಖ್ಯಾತ ಹಿಂದುಗಳ ರಕ್ಷಣೆ ನೀಡಬೇಕು ಎಂದರು
ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ಮೀಸಲಾತಿ ನೀಡಬೇಕು ಎಂದು ಅಲ್ಲಿ ನಡೆದ ಹಿಂಸಾಚಾರದ ವೇಳೆ ಅಲ್ಲಿನ ಹಿಂದುಗಳ ಮನೆಗಳ ಲೋಟಿ ಮಾಡಲಾಗಿದೆ. ಇದನ್ನು ವಿಶ್ವಹಿಂದು ಪರಿಷತ್ ಖಂಡಿಸುತ್ತೆ. ಬಾಂಗ್ಲಾದೇಶದಲ್ಲಿ 32% ಇದ್ದ ಹಿಂದುಗಳು 8 % ಕ್ಕೆ ಕುಸಿದಿದ್ದಾರೆ. ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಆಗಿದೆ, ಮುಸ್ಲಿಂರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಬಾಂಗ್ಲಾದೇಶದಲ್ಲಿರುವ ಹಿಂದುಗಳಿಗೆ ಕೇಂದ್ರ ರಕ್ಷಣೆ ನೀಡಬೇಕು. ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಖಂಡಿಸಿ, ಹಿಂದುಗಳ ರಕ್ಷಣೆಗೆ ಜಿಲ್ಲಾ ಕೇಂದ್ರಗಳಲ್ಲೂ ಮನವಿ ಸಲ್ಲಿಸುತ್ತೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ