ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಸತ್ಸಂಗಗಳಲ್ಲಿ ಭಾಗಿಯಾಗಿ ಸಂತರು, ಮಹಂತರ ಪವಿತ್ರ ನುಡಿಗಳನ್ನು ಆಲಿಸಿದ ನಂತರ ಅವುಗಳನ್ನು ಜೀವನದಲ್ಲಿ ಕಾರ್ಯರೂಪಕ್ಕೆ ತಂದಾಗ ಮಾತ್ರ ಅಂಥ ಕಾರ್ಯಕ್ರಮಗಳ ಆಯೋಜನೆ ಸಾರ್ಥಕವೆನಿಸುತ್ತದೆ” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಸುಕ್ಷೇತ್ರ ಬಡಾಲ ಅಂಕಲಗಿಯಲ್ಲಿ ನಡೆದ ಶ್ರೀ ಸದ್ಗುರು ಬ್ರಹ್ಮಲೀನ ಸದಾನಂದ ಮಹಾಸ್ವಾಮಿಗಳ 18 ನೇ ಪುಣ್ಯಾರಾಧನೆ ಮತ್ತು ಸತ್ಸಂಗ ಸಮ್ಮೇಳದಲ್ಲಿ ಪಾಲ್ಗೊಂಡು, ಮಹಾಸ್ವಾಮಿಗಳ ದರ್ಶನ ಪಡೆದು ಅವರು ಮಾತನಾಡಿದರು.
“ಭಾರತೀಯ ಸಂಸ್ಕೃತಿಯ ಸತ್ಸಂಗ ಪರಂಪರೆ ಇಡೀ ಜಗತ್ತಿಗೆ ಮಾದರಿಯಾಗಿದೆ. ಸಂತರ ಸಂಗದಿಂದ ಜೀವನದ ಯಾವ ಸುಖ, ಸಂತೋಷಕ್ಕೆ ಭಂಗ ಬರುವುದಿಲ್ಲ. ಜತೆಗೆ ಮನಸ್ಸು ಶುದ್ಧವಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿಯ ನೆಲೆ ಕಾಣಲು ಸಾಧ್ಯವಾಗುತ್ತದೆ” ಎಂದರು.
ಈ ಸಮಯದಲ್ಲಿ ಶ್ರೀ ಮೌನಯೋಗಿ ರಾಚಯ್ಯ ಮಹಾಸ್ವಾಮಿಗಳು, ವಿವಿಧ ಮಠಾಧೀಶರು, ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು, ಗ್ರಾಮದ ಹಿರಿಯರು ಹಾಗೂ ಸದ್ಭಕ್ತ ಮಂಡಳಿಯವರು ಉಪಸ್ಥಿತರಿದ್ದರು.
ನಾಡಿನ ಸಂಸ್ಕೃತಿ, ಪರಂಪರೆಗೆ ಜೈನರ ಕೊಡುಗೆ ಅಪಾರ
https://pragati.taskdun.com/the-contribution-of-jains-to-the-culture-and-heritage-of-the-country-is-immense/
ಫೆ.27ರಂದು ಹಲವೆಡೆ ವಿದ್ಯುತ್ ವ್ಯತ್ಯಯ
https://pragati.taskdun.com/power-failure-in-many-places-on-february-27/
*ಪುಟ್ಟ ಬಾಲಕನ ಮೇಲೆ ಬೀದಿನಾಯಿಗಳ ದಾಳಿ; ಕಚ್ಚಿ ಎಳೆದಾಡಿ ಮಗುವನ್ನು ಕೊಂದ ನಾಯಿಗಳು*
https://pragati.taskdun.com/street-dogattackboydeath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ