Latest

ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳ ಮಸೂದೆ-2022ಕ್ಕೆ ಇನ್ನಷ್ಟು ಸೇರ್ಪಡೆಗಳಾಗಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಘಟಕದ ವತಿಯಿಂದ ಉನ್ನತ ಶಿಕ್ಷಣ ಇಲಾಖೆ ಜಾರಿಗೆ ತರಲು ಯೋಜಿಸಿರುವ ಕರ್ನಾಟಕ ರಾಜ್ಯ ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳ ಮಸೂದೆ – 2022 ರ ಕುರಿತು ಶಿಕ್ಷಕರ ಭವನ ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆಯನ್ನು ನಡೆಸಲಾಯಿತು.

ಈ ದುಂಡು ಮೇಜಿನ ಸಭೆಯಲ್ಲಿ ಹಲವಾರು ವಿಶ್ವವಿದ್ಯಾಲಯಗಳ ಉಪಕುಲಪತಿಗಳು , ವಿಶ್ರಾಂತ ಕುಲಪತಿಗಳು , ಶಿಕ್ಷಣ ತಜ್ಞರು , ಸಿಂಡಿಕೇಟ್ ಸದಸ್ಯರು , ಸೇರಿದಂತೆ ವಿದ್ಯಾರ್ಥಿ ನಾಯಕರುಗಳು ಭಾಗವಹಿಸಿ ಈ ಮಸೂದೆಯಲ್ಲಿ ತರಬೇಕಾಗಿರುವ
ಬದಲಾವಣೆ ಸೇರ್ಪಡೆಗೊಳ್ಳ ಬೇಕಾಗಿರುವ ವಿಚಾರಗಳ ಕುರಿತು ಚರ್ಚೆಯನ್ನು ನಡೆಸಲಾಯಿತು.

ಈ ಮಸೂದೆಯಲ್ಲಿ ವಿವಿ ಗಳ ಸ್ಥಿರ ಆಸ್ತಿಗಳ ಮಾರಾಟಕ್ಕೆ ನೀಡಿರುವ ಅವಕಾಶ , ವಿವಿ ಆಸ್ತಿಗಳನ್ನು ಆಡವಿಟ್ಟು ಸಾಲ ಪಡೆಯುವ ಅವಕಾಶದ ಕಲಂಗಳನ್ನು ತೆಗೆಯುವಂತೆ , ಉಪಕುಲಪತಿಗಳ ನಿವೃತ್ತಿ ಹೊಂದುವ ವಯೋಮಾನವನ್ನು 70 ವರ್ಷಗಳನ್ನು ನೀಡಿದ್ದು , ನಿವೃತ್ತಿ ವಯೋಮಾನ 65 ವರ್ಷಕ್ಕೆ ಇಳಿಕೆ ಮಾಡುವಂತೆ , ಬೋರ್ಡ್ ಆಫ್ ಗವರ್ನರ್ ಹಾಗೂ ಅಕಾಡೆಮಿಕ್ ಸೆನೆಟ್ ಸದಸ್ಯರಲ್ಲಿ ವಿದ್ಯಾರ್ಥಿಗಳಿಗೆ ಪ್ರಾತಿನಿಧ್ಯತೆ ನೀಡುವ ಕುರಿತು , ಬೋರ್ಡ್ ಆಫ್ ಗವರ್ನರ್ ನ ಚೇರ್ಮನ್ ಆಯ್ಕೆಯಲ್ಲಿ ಕನಿಷ್ಠ್ಠ ವಿದ್ಯಾರ್ಹತೆ ಮತ್ತು ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡುವ ಕುರಿತು , ನಿವೃತ್ತ ಪ್ರಾಧ್ಯಾಪಕರನ್ನು ಉಪಕುಲಪತಿಗಳಾಗಿ ನೇಮಿಸಬಾರದು ಎಂಬುವ ವಿಚಾರಗಳನ್ನು ಸೇರ್ಪಡೆಗೊಳಿಸ ಬೇಕಾಗಿ ಸರ್ಕಾರಕ್ಕೆ ಸಲಹೆ ನೀಡುವಂತೆ ಈ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಈ ದುಂಡು ಮೇಜಿನ ಸಭೆಯಲ್ಲಿ ತುಮಕೂರು ವಿವಿಯ ಸಿದ್ದೇಗೌಡ್ರು , ಬೆಂಗಳೂರು ವಿವಿ ಕುಲಪತಿ ಜಯಕರ ಶೆಟ್ಟಿ , ಮಹಾರಾಣಿ ಕ್ಲಸ್ಟರ್ ವಿವಿ ಉಪಕುಲಪತಿ ಗೋಮತಿದೇವಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ ಶಹಾಪುರ, ಬೆಂಗಳೂರು ಉತ್ತರ ವಿ.ವಿ ಉಪಕುಲಪತಿ ನಿರಂಜನ್ , ಎಬಿವಿಪಿ ಪ್ರಾಂತ ಪ್ರಮುಖ ರಾಮಚಂದ್ರ ಶೆಟ್ಟಿ , ಪ್ರಾಂತ ಅಧ್ಯಕ್ಷ  ಸತೀಶ್, ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರುಳಾಪುರ , ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ, ಕೇಂದ್ರ ಕಾರ್ಯಸಮಿತಿ ಸದಸ್ಯೆ
ಪ್ರೇಮಾಶ್ರೀ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಗಡಿ ವಿವಾದ : ಜನಪ್ರತಿನಿಧಿಗಳ ನಿರ್ಲಕ್ಷ ಮತ್ತು ಕೇಂದ್ರದ ನಿಲುವಿಗೆ ಚಿಂಚಣಿ ಶ್ರೀಗಳ ಅಕ್ಷೇಪ

https://pragati.taskdun.com/boundary-dispute-neglect-of-the-peoples-representatives-and-chinchani-shris-objection-to-the-centres-stand/

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಡೇಟ್ ಫಿಕ್ಸ್

https://pragati.taskdun.com/vidhanasabha-election-2023congresscandidate-listd-k-sivakumar/

*ಬೆಳಗಾವಿ ಅಧಿವೇಶನ; ಸಿಎಂ ಬೊಮ್ಮಾಯಿ ಕಾರ್ಯಕಲಾಪದ ಬಗ್ಗೆ ಇಲ್ಲಿದೆ ಮಾಹಿತಿ*

https://pragati.taskdun.com/belagaviwinter-sessioncm-basavaraj-bommai-2/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button